×
Ad

ಸಾಕಾನೆಗಳಿಂದ ಉಪಟಳ: 7 ಆನೆಗಳು ಬಂಡೀಪುರ ರಾಂಪುರ ಶಿಬಿರಕ್ಕೆ ಸ್ಥಳಾಂತರ

Update: 2021-12-17 21:09 IST

ಚಾಮರಾಜನಗರ: ದುಬಾರೆಯ ಖಾಸಗಿ ಒಡೆತನದಲ್ಲಿದ್ದ 7 ಸಾಕಾನೆಗಳು ಬಂಡೀಪುರ ಶಿಬಿರಕ್ಕೆ ಸ್ಥಳಾಂತರಗೊಂಡಿದೆ.

ಮಡಿಕೇರಿ ಜಿಲ್ಲೆಯ ದುಬಾರೆ ಅರಣ್ಯ ಪ್ರದೇಶದ ನಡುವೆ ಖಾಸಗಿ ಒಡೆತನದ ಆನೆ ಮನೆ ಫೌಂಡೇಷನ್ ವಶದಲ್ಲಿದ್ದ 7ಸಾಕಾನೆಗಳನ್ನು ಅರಣ್ಯ ಇಲಾಖೆ ಹಿಡಿದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಿದೆ.

ವನ್ಯಜೀವಿ ತಜ್ಞೆ ಪ್ರಜ್ಞಾ ಚೌಟ ಸರ್ಕಾರದಿಂದ ಅನುಮತಿ ಪಡೆದು ಕಾಡಿನ ಮಧ್ಯೆ ಆನೆಗಳನ್ನು ಸಾಕುತ್ತಿದ್ದರು. ಸಾಕಾನೆಗಳಿಂದ ಉಂಟಾಗುತ್ತಿದ್ದ ಸಮಸ್ಯೆ ಕುರಿತು ಇಲಾಖೆಯು ಸರ್ಕಾರಕ್ಕೆ ವರದಿ ನೀಡಿದ ಹಿನ್ನಲೆಯಲ್ಲಿ  ಫೌಂಡೇಷನ್ ವಶದಲ್ಲಿದ್ದ ಎಲ್ಲಾ ಸಾಕಾನೆಗಳನ್ನು ಸ್ಥಳಾಂತರ ಮಾಡುವಂತೆ ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು ಆದೇಶಿಸಿದ್ದರು.

ಸಾಕಾನೆಗಳಾದ ಹೀರಣ್ಯ, ಮಾಲಾದೇವಿ , ಪೂಜಾ, ಕಮಲಿ ,ಕನ್ನಿಕಾ, ಧರ್ಮ,ಹಾಗೂ ಜಗ ಸ್ಥಳಾಂತರಗೊಂಡಿದೆ.

ಬಂಡೀಪುರದ ರಾಮಪುರ ಆನೆ ಶಿಬಿರದಲ್ಲಿ ಈಗ 25 ಕ್ಕೂ ಹೆಚ್ಚು ಆನೆಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News