ಬೆಳಗಾವಿ ಅಧಿವೇಶನಕ್ಕೆ ಬಂದ ವಾಹನಗಳ ಮೇಲೆ ಕಲ್ಲೆಸೆತ: 27 ಆರೋಪಿಗಳ ಸೆರೆ
Update: 2021-12-18 10:19 IST
ಬೆಳಗಾವಿ, ಡಿ.18: ಸುವರ್ಣ ವಿಧಾನ ಸೌಧದಲ್ಲಿ ವಿಧಾನ ಮಂಡಲ ಅಧಿವೇಶಕ್ಕೆ ಬಂದಿರುವ ವಾಹನಗಳ ಮೇಲೆ ಕಳೆದ ರಾತ್ರಿ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 27 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಧಿವೇಶಕ್ಕೆ ಬಂದಿರುವ ವಾಹನಗಳ ಸಹಿತ 20ಕ್ಕೂ ಅಧಿಕ ವಾಹನಗಳ ಮೇಲೆ ಶುಕ್ರವಾರ ರಾತ್ರಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಣದ ಯಾದಗಿರಿ ಸಿಪಿಐ ಜೀಪ್ ಸೇರಿದಂತೆ ನಾಲ್ಕು ಪೊಲೀಸ್ ವಾಹನಗಳು, ನಾಲ್ಕು ಸರಕಾರಿ ಕಾರುಗಳು ಕೂಡಾ ಜಖಂಗೊಂಡಿವೆ. ಈ ಬಗ್ಗೆ ನಗರದ ಮಾರ್ಕೆಟ್ ಪೊಲೀಸ್ ಠಾಣೆ, ಕ್ಯಾಂಪ್ ಪೊಲೀಸ್ ಠಾಣೆ ಹಾಗೂ ಖಡೇ ಬಝಾರ್ ಪೊಲೀಸ್ ಠಾಣೆಗಳಲ್ಲಿ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.