ಬಿಜೆಪಿ ಮುಖಂಡನ ಹತ್ಯೆ: ಕೇರಳ ಸರಕಾರದ ವಿರುದ್ಧ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ
ಬೆಂಗಳೂರು: ಕೇರಳದ ಆಲಪ್ಪುಝದಲ್ಲಿ ಬಿಜೆಪಿ ರಾಜ್ಯ ನಾಯಕರೋರ್ವರ ಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು, ಕೇರಳ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ''ನಮ್ಮ ಪಕ್ಷದ ಕೇರಳ ರಾಜ್ಯ ಓಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ರೇಂಜಿತ್ ಶ್ರೀನಿವಾಸನ್ ಅವರು ಮೂಲಭೂತವಾದಿಗಳ ರಕ್ತದಾಹಕ್ಕೆ ಬಲಿಯಾಗಿರುವುದು ಖಂಡನೀಯ. ಕೇರಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಲು ಸಿಎಂ ಪಿಣರಾಯಿ ವಿಜಯನ್ ದುರಾಡಳಿತವೇ ಕಾರಣ. ಇಂತಹ ಕೃತ್ಯಗಳಿಂದ ದೇಶಭಕ್ತರನ್ನು ಹೆದರಿಸಲು ಸಾಧ್ಯವಿಲ್ಲ'' ಎಂದು ಹೇಳಿದ್ದಾರೆ.
ಬಿಜೆಪಿಯ ಕೇರಳ ರಾಜ್ಯ ಘಟಕದ ಒಬಿಸಿ ಮೋರ್ಚಾ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ರನ್ನು ರವಿವಾರ ಬೆಳಗ್ಗೆ ಗುಂಪೊಂದು ಇರಿದು ಕೊಲೆಗೈದಿತ್ತು.
ನಮ್ಮ ಪಕ್ಷದ ಕೇರಳ ರಾಜ್ಯ ಓಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ರೇಂಜಿತ್ ಶ್ರೀನಿವಾಸನ್ ಅವರು ಮೂಲಭೂತವಾದಿಗಳ ರಕ್ತದಾಹಕ್ಕೆ ಬಲಿಯಾಗಿರುವುದು ಖಂಡನೀಯ.
— Nalinkumar Kateel (@nalinkateel) December 19, 2021
ಕೇರಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಲು ಸಿಎಂ @vijayanpinarayi ದುರಾಡಳಿತವೇ ಕಾರಣ. ಇಂತಹ ಕೃತ್ಯಗಳಿಂದ ದೇಶಭಕ್ತರನ್ನು ಹೆದರಿಸಲು ಸಾಧ್ಯವಿಲ್ಲ. pic.twitter.com/legornaYik