×
Ad

ರಾಜ್ಯ ಹೈಕೋರ್ಟ್‍ಗೆ ಡಿ.24ರಿಂದ ಚಳಿಗಾಲದ ರಜೆ

Update: 2021-12-19 21:31 IST

ಬೆಂಗಳೂರು, ಡಿ.19: ರಾಜ್ಯ ಹೈಕೋರ್ಟ್‍ನ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಹಾಗೂ ಕಲಬುರಗಿ ಪೀಠಗಳಿಗೆ ಡಿಸೆಂಬರ್ 24ರಿಂದ ಜನವರಿ 1ರವರೆಗೆ ರಜೆ ನೀಡಿ ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್‍ಕುಮಾರ್ ಅಧಿಸೂಚನೆ ಹೊರಡಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ಆದೇಶದ ಮೇರೆಗೆ ಈ ಅಧಿಸೂಚನೆ ಹೊರಡಿಸಿದ್ದು, ಡಿ.24ರಿಂದ ಜ.1ರವರೆಗೆ ಒಟ್ಟು 9 ದಿನಗಳ ಕಾಲ ರಜೆ ನೀಡಲಾಗಿದೆ. 

ರಜೆ ಅವಧಿಯಲ್ಲಿ ದೈನಂದಿನ ಕಲಾಪಗಳು ನಡೆಯುವುದಿಲ್ಲ. ಡಿಸೆಂಬರ್ 27ರಂದು ಬೆಂಗಳೂರು ಪ್ರಧಾನ ಪೀಠದಲ್ಲಿ ರಜಾ ಕಾಲದ ನ್ಯಾಯಪೀಠಗಳು ನಡೆಯಲಿದ್ದು, ತುರ್ತು ಪ್ರಕರಣಗಳನ್ನು ವಿಚಾರಣೆಗೆ ಪರಿಗಣಿಸಲಾಗುತ್ತದೆ. ಕಲಬುರಗಿ ಮತ್ತು ಧಾರವಾಡದ ಹೈಕೋರ್ಟ್ ನ್ಯಾಯಪೀಠದಲ್ಲಿ ರಜಾ ಕಾಲದ ಪೀಠಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News