×
Ad

ಪುಣೆಯಲ್ಲಿ ಕರ್ನಾಟಕ ಸಾರಿಗೆ ಬಸ್ ಮೇಲೆ ಕಲ್ಲೆಸೆತ

Update: 2021-12-19 23:10 IST

ಯಾದಗಿರಿ: ಮಹಾರಾಷ್ಟ್ರದ ಪುಣೆಗೆ ತೆರಳಿದ್ದ ಸುರಪುರ ಡಿಪೋ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿರುವ ಘಟನೆ ನಡೆದಿದೆ.

ಕೊಲ್ಲಾಪುರದಲ್ಲಿ ಕನ್ನಡ ಧ್ವಜವನ್ನು ಸುಟ್ಟಿರುವುದು ಮತ್ತು ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ಧ್ವಂಸಗೊಳಿಸುವ ಮೂಲಕ ದುಷ್ಕೃತ್ಯ ಮೆರೆದಿರುವ ಕಿಡಿಗೇಡಿಗಳು ಈಗ ಬಸ್ ಮೇಲೆ ಕಲ್ಲೆಸೆಯುವ ಮೂಲಕ ತಮ್ಮ ದುಷ್ಕೃತ್ಯವನ್ನು ಮುಂದುವರಿಸಿದ್ದಾರೆ.

ರವಿವಾರ ಮುಂಜಾನೆ ಪುಣೆ ಬಸ್ ನಿಲ್ದಾಣದಲ್ಲಿದ್ದ ಬಸ್ಸಿನ ಮೇಲೆ ಕಲ್ಲೆ ತೂರಾಟ ಮಾಡಿರುವ ಕಿಡಿಗೇಡಿಗಳು ಎರಡೂ ಬದಿಯ ಗಾಜು ಪುಡಿಗೊಳಿಸಿದ್ದಾರೆ. 

ಈ ಸಂಬಂಧ ಬಸ್ ಚಾಲಕ ಮತ್ತು ನಿರ್ವಾಹಕ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಸುರಪುರ, ಶಹಾಪುರ, ಸಿಂದಗಿ, ಸೊಲ್ಲಾಪುರ ಮಾರ್ಗವಾಗಿ ಪುಣೆಗೆ ತೆರಳಿದ್ದ ಸರಕಾರಿ ಬಸ್ ರವಿವಾರ ಇಲ್ಲಿನ ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News