ನಾನು ನಾಲ್ಕು ದಿನಗಳ ಹಿಂದೆಯೇ ಸತ್ತು ಹೋಗಿದ್ದೇನೆ: ರಮೇಶ್ ಕುಮಾರ್
Update: 2021-12-20 11:42 IST
ಬೆಳಗಾವಿ: 'ನಾನು ನಾಲ್ಕು ದಿನಗಳ ಹಿಂದೆಯೇ ಸತ್ತು ಹೋಗಿದ್ದೇನೆ' ಎಂದು ಮಾಜಿ ಸ್ಪೀಕರ್, ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕರವೇ ಕಾರ್ಯಕರ್ತರ ಬೆಳಗಾವಿ ಚಲೋ ಹಾಗೂ ಎಂಇಎಸ್ ಕಾರ್ಯಕರ್ತರ ಕಿಡಿಗೇಡಿತನದ ವಿಚಾರಕ್ಕೆ ಸುವರ್ಣ ಸೌಧ ಬಳಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ರಮೇಶ್ ಕುಮಾರ್, ‘ನಾನು ನಾಲ್ಕು ದಿನಗಳ ಹಿಂದೆಯೇ ಸತ್ತು ಹೋಗಿದ್ದೇನೆ, ಜೀವಂತವಾಗಿರುವವರನ್ನು ಮಾತಾಡಿಸಿ' ಎಂದು ಹೇಳುತ್ತಾ ಕೈ ಮುಗಿದು ವಿಧಾನಸಭೆಗೆ ತೆರಳಿದ್ದಾರೆ.
ಇತ್ತೇಚೆಗೆ ವಿಧಾನಸಭೆ ಅಧಿವೇಶನದಲ್ಲಿ ರೈತರ ಸಮಸ್ಯೆಗಳ ಚರ್ಚೆಗೆ ಅರೆಮನಸ್ಸಿನ ಒಪ್ಪಿಗೆ ನೀಡಿದ್ದನ್ನು ಖಂಡಿಸುವ ವೇಳೆ ರಮೇಶ್ ಕುಮಾರ್ ಅವರು 'ಅತ್ಯಾಚಾರ ಅನಿವಾರ್ಯವಾದರೆ ಆನಂದಿಸುವ' ಹೇಳಿಕೆ ಯನ್ನು ಉಲ್ಲೇಖಿಸಿದ್ದರು.