ಚಾಮುಂಡಿ ಬೆಟ್ಟ ಭೂ ಕುಸಿತ ತಡೆಯಲು ಕ್ರಮ: ಸಚಿವ ಸಿ.ಸಿ.ಪಾಟೀಲ್

Update: 2021-12-20 15:39 GMT

ಬೆಳಗಾವಿ ಸುವರ್ಣವಿಧಾನಸೌಧ, ಡಿ. 20: ಮೈಸೂರಿನ ಚಾಮುಂಡಿ ಬೆಟ್ಟದ ಹೊಸನಂದಿ ರಸ್ತೆಯ ಪ್ರದೇಶದಲ್ಲಿ ರೀಇನ್‍ಫೋಸ್ರ್ಡ್ ಅರ್ಥ್ ಸ್ಟೀಪನ್ಡ್ ಸ್ಟ್ರಕ್ಚರ್ಸ್ ವಾಲ್ ನಿರ್ಮಿಸಲು 10 ಕೋಟಿ ರೂ.ವೆಚ್ಚದ ಪ್ರಸ್ತಾವನೆ ಸಿದ್ಧವಾಗಿದೆ. ಕಾಮಗಾರಿಯನ್ನು ಪ್ರಾರಂಭಿಸಲು ಕ್ರಮವಹಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಭೂ ಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ಸಚಿವ ಬೈರತಿ ಬಸವರಾಜ ವಜಾಕ್ಕೆ ಪ್ರತಿಪಕ್ಷಗಳ ಗದ್ದಲದ ಮಧ್ಯೆ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಸದಸ್ಯ ಜಿ.ಟಿ.ದೇವೆಗೌಡ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಚಾಮುಂಡಿ ಬೆಟ್ಟದ ಹೊಸನಂದಿ ರಸ್ತೆಯ 1.40 ಕಿ.ಮೀ ಉದ್ದದ ರಸ್ತೆಯು ಜಿಲ್ಲಾ ಮುಖ್ಯ ರಸ್ತೆಯಾಗಿದೆ. ನವೆಂಬರ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಕುಸಿದಿರುವ ರಸ್ತೆಯನ್ನು ಪುನರ್ ನಿರ್ಮಾಣ ಮಾಡಲು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರನ್ನು ಸಂಪರ್ಕಿಸಿ ವರದಿ ಪಡೆಯಲಾಗಿದೆ. ಭೂ ಕುಸಿತ ಪ್ರದೇಶದಲ್ಲಿ ರೀಇನ್‍ಫೋಸ್ರ್ಡ್ ಅರ್ಥ್ ಸ್ಟೀಪನ್ಡ್ ಸ್ಟ್ರಕ್ಚರ್ಸ್ ವಾಲ್ ನಿರ್ಮಿಸಲು 10 ಕೋಟಿ ರೂ.ಗಳ ಪ್ರಸ್ತಾವನೆ ಸಿದ್ಧವಾಗಿದೆ. ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News