ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ದಾಖಲು

Update: 2021-12-20 18:18 GMT
ಫೋಟೊ ಕೃಪೆ: PTI

ಬೆಂಗಳೂರು, ಡಿ.20: ರಾಜ್ಯದ ಒಳನಾಡು, ಘಟ್ಟ ಪ್ರದೇಶ ಹಾಗೂ ಬೆಂಗಳೂರು ಸುತ್ತಮುತ್ತ ಕನಿಷ್ಠ ತಾಪಮಾನ ದಾಖಲಾಗಿದೆ.

ಧಾರವಾಡದಲ್ಲಿ 9.4, ಬಾಗಲಕೋಟೆ 10.2, ಬಳ್ಳಾರಿ 10.7, ಬೀದರ್ 10.5, ವಿಜಯಪುರ 10.2 ಮತ್ತು ಬೆಂಗಳೂರು ಸುತ್ತಮುತ್ತ 10-12 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರಿಂದಾಗಿ ಈ ಜಿಲ್ಲೆಗಳಲ್ಲಿ ತುಸು ಹೆಚ್ಚು ಚಳಿ ಕಾಣಿಸಿಕೊಂಡಿದೆ. 

ರಾಜ್ಯದ ಘಟ್ಟ ಪ್ರದೇಶಗಳಲ್ಲಿ 8-12ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ. ವಾತಾವರಣ ಉಷ್ಣಾಂಶದ ಇಳಿಕೆಯ ಅವಧಿ ಸಾಮಾನ್ಯ ವರ್ಷಗಳಲ್ಲಿ 40-45 ದಿನಗಳು ಇರುತ್ತವೆ. ಆದರೆ, ಈ ಬಾರಿ 16 ದಿನಗಳು ಇರಲಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News