×
Ad

​ರಾಜ್ಯದಲ್ಲಿ ಇನ್ನು ಆಯ್ದ ವಾಹನಗಳಿಗೆ ಬಿಎಚ್ ಸೀರಿಸ್ ನೋಂದಣಿ

Update: 2021-12-21 08:12 IST
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸುಲಲಿತವಾಗಿ ವಾಹನ ವರ್ಗಾವಣೆ ಮಾಡಿಕೊಳ್ಳಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಆಯ್ದ ವಾಹನ ಮಾಲಕರಿಗೆ ಬಿಎಚ್ (ಭಾರತ್) ಸೀರಿಸ್ ನೋಂದಣಿ ಸಂಖ್ಯೆಯನ್ನು ನೀಡಲು ಸರ್ಕಾರ ಆರಂಭಿಸಿದೆ.

ಎರಡು ದಿನಗಳ ಹಿಂದೆ ಬಿಎಚ್ ಸೀರಿಸ್ ನೋಂದಣಿ ಸಂಖ್ಯೆಯ ಅರ್ಜಿಗಳ ಸಂಸ್ಕರಣೆ ಆರಂಭಿಸಲಾಗಿದೆ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಜೆ.ಪುರುಷೋತ್ತಮ್ ಹೇಳಿದ್ದಾರೆ.

ನಿಯಮಾವಳಿಯ ಪ್ರಕಾರ, ಬಿಎಚ್ ಸರಣಿಯ ನೋಂದಣಿ ಬಯಸುವವರು ಕೇಂದ್ರ ಸರ್ಕಾರಿ ನೌಕರರಾಗಿರಬೇಕು ಇಲ್ಲವೇ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಇಲ್ಲವೇ ನಾಲ್ಕಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕಚೇರಿ ಅಥವಾ ಘಟಕಗಳನ್ನು ಹೊಂದಿರುವ ಸಂಸ್ಥೆಗಳ ಉದ್ಯೋಗಿಗಳಾಗಿರಬೇಕು.

ಇತರ ರಾಜ್ಯಗಳಿಂದ ಆಗಮಿಸುವ ವಾಹನಗಳ ಮಾಲಕರು, ರಾಜ್ಯವನ್ನು ಪ್ರವೇಶಿಸಿದ 15 ದಿನಗಳ ಒಳಗಾಗಿ ಸಾರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಹಾಗೂ ಮುಂದಿನ ಹನ್ನೆರಡು ತಿಂಗಳ ಒಳಗಾಗಿ ಸ್ಥಳೀಯ ಆರ್‌ಟಿಓ ಬಳಿ ನೋಂದಣಿ ಮಾಡಿಸಿಕೊಳ್ಳಬೇಕು. ಇದಕ್ಕೆ ನಿಗದಿತ ಶುಲ್ಕ ಪಾವತಿಸುವ ಜತೆಗೆ ಅಗತ್ಯ ವಿಧಿವಿಧಾನಗಳನ್ನು ಪೂರೈಸಬೇಕಾಗುತ್ತದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News