×
Ad

ಸಂಗೊಳ್ಳಿ ರಾಯಣ್ಣರ ಪ್ರತಿಮೆಗೆ ಅವಮಾನ ಮಾಡಿದವರು ದೇಶದ್ರೋಹಿಗಳು, ಅವರಿಗೆ ತಕ್ಕ ಶಾಸ್ತಿ: ಗೃಹಸಚಿವ

Update: 2021-12-21 10:15 IST

ಬೆಳಗಾವಿ, ಡಿ.21:  ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಅವಮಾನ ಮಾಡಿದ ದುಷ್ಕರ್ಮಿಗಳು ದೇಶದ್ರೋಹಿಗಳು. ಅವರಿಗೆ ತಕ್ಕ ಶಾಸ್ತಿ ವಿಧಿಸುತ್ತೇವೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬೆಳಗಾವಿ ನಗರ ಅನಾಗೊಳದಲ್ಲಿ ಪುನರ್ ಪ್ರತಿಷ್ಠಾಪನಗೊಳಿಸಿದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆಗೆ ಇಂದು ಬೆಳಗ್ಗೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ರಾಯಣ್ಣರ ಪ್ರತಿಮೆಗೆ ಅವಮಾನ ಮಾಡಿರುವುದರ ಹಿಂದೆ ಇರಬಹುದಾದ ಸಂಚನ್ನು ಪೊಲೀಸರು ಬಯಲುಗೊಳಿಸಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News