×
Ad

ಶಿಕ್ಷಕರ ವೇತನ ಹೆಚ್ಚಳಕ್ಕೆ ಪರಿಶೀಲನೆ: ಸಚಿವ ಹಾಲಪ್ಪ ಆಚಾರ್

Update: 2021-12-21 16:43 IST

ಬೆಳಗಾವಿ (ಸುವರ್ಣವಿಧಾನಸೌಧ), ಡಿ.21: ಸರಕಾರಿ ಅಂಧ ಮತ್ತು ಕಿವುಡು ಮಕ್ಕಳ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರ ವೇತನ ಹೆಚ್ಚಳ ಸಂಬಂಧ ಪರಿಶೀಲನೆ ನಡೆಸಲಾಗುವುದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವ ಹಾಲಪ್ಪ ಆಚಾರ್ ಹೇಳಿದರು.

ಮಂಗಳವಾರ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಶಶೀಲ್ ಜಿ.ನಮೋಶಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪದವಿ ಪೂರ್ವ ಸಹಾಯಕ ಶಿಕ್ಷಕರು 23ರಿಂದ 47 ಸಾವಿರ ರೂ., ದೈಹಿಕ ಶಿಕ್ಷಣ ಶಿಕ್ಷಕರು 23ರಿಂದ 47 ಸಾವಿರ ರೂ., ಸಂಗೀತ ಶಿಕ್ಷಕರು(ದರ್ಜೆ ಎರಡು) 23 ರಿಂದ 47 ಸಾವಿರ ರೂ., ಹಾಗೂ ಸಂಗೀತ ಶಿಕ್ಷಕ (ದರ್ಜೆ ಮೂರು) 21 ರಿಂದ 42 ಸಾವಿರ ರೂ. ವೇತನ ಶ್ರೇಣಿ ಇದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News