ಇಂದು ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ಬಗ್ಗೆ ಚರ್ಚೆ
Update: 2021-12-22 11:35 IST
ಬೆಳಗಾವಿ: ವಿಧಾನಸಭೆಯಲ್ಲಿ ತೀವ್ರ ಗದ್ದಲ-ಕೋಲಾಹಲದ ಮಧ್ಯೆ ನಿನ್ನೆ(ಮಂಗಳವಾರ) ಮಂಡನೆ ಮಾಡಲಾಗಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2021ದ ಕುರಿತು ಇಂದು ಸದನದಲ್ಲಿ ಚರ್ಚೆ ನಡೆಯಲಿದೆ.
ವಿಪಕ್ಷ ಸದಸ್ಯರಿಗೆ ವಿಧೇಯಕದ ಪ್ರತಿ ನೀಡದೆ ಸ್ಪೀಕರ್ ವಿಶ್ವೇಶ್ವರ್ ಹಗಡೆ ಕಾಗೇರಿಯವರು ತರಾತುರಿಯಲ್ಲಿ ಮಸೂದೆ ಮಂಡನೆಗೆ ಅವಕಾಶ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಸದಸ್ಯರು ಸಭಾ ತ್ಯಾಗ ಮಾಡಿರುವ ಪ್ರಸಂಗವೂ ನಡೆದಿತ್ತು.
ಇಂದು ವಿಧೇಯಕದ ಪರ್ಯಾಲೋಚನೆ ನಡೆಯಲಿದ್ದು, ಸದನದಲ್ಲಿ ತನ್ನೆಲ್ಲ ಶಾಸಕರು ಕಡ್ಡಾಯವಾಗಿ ಹಾಜರಿರುವಂತೆ ಕಾಂಗ್ರೆಸ್ ಈಗಾಗಲೇ ಸೂಚನೆ ನೀಡಿದೆ.