×
Ad

ಹಾಸನ: ಮಾಹಿತಿ ನೀಡದೆ ನಿರ್ಲಕ್ಷ್ಯ; ತಹಶೀಲ್ದಾರ್‌ಗೆ 10 ಸಾವಿರ ರೂ.ದಂಡ

Update: 2021-12-22 19:41 IST

ಹಾಸನ: ಅಕ್ರಮ ಭೂ ಮಂಜೂರಾತಿ ಸಂಬಂಧ ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿದ್ದ ವ್ಯಕ್ತಿಯೋರ್ವನಿಗೆ ವರ್ಷ ಕಳೆದರೂ ಮಾಹಿತಿ ಹಾಗೂ ಪ್ರತ್ಯುತ್ತರ ನೀಡದ ಕಾರಣ ಈ ಹಿಂದೆ ಅರಕಲಗೂಡು ತಹಶೀಲ್ದಾರ್ ಆಗಿದ್ದ ರೇಣುಕುಮಾರ್‌ ಅವರಿಗೆ ಮಾಹಿತಿ ಹಕ್ಕು ಆಯೋಗ 10 ಸಾವಿರ ರೂ. ದಂಡ ವಿಧಿಸಿದೆ.

ಮಾಹಿತಿ ಹಕ್ಕು ಅಧಿನಿಯಮ 2005 ಅಡಿಯಲ್ಲಿ ಅರಕಲಗೂಡು ತಾಲೂಕಿನ ಮಾಹಿತಿ ಹಕ್ಕು ಕಾರ್ಯಕರ್ತ ಸೈಯ್ಯದ್ ಜಿಯಾ ಉದ್ದೀನ್ ತಂದೆಯ ಅವದಿಯಲ್ಲಿ ಖರೀದಿ ಮಾಡಿದ್ದ ಆಸ್ತಿಯನ್ನು ಅಕ್ರಮವಾಗಿ ಬೇರೆಯವರಿಗೆ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಈ ಕುರಿತು ಮಾಹಿತಿ ಹಕ್ಕು ಅಧಿನಿಯದು ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಗೆ ವರ್ಷ ಕಳೆದರೂ ಉತ್ತರ ನೀಡಿರಲಿಲ್ಲ. ಈ ಸಂಬಂಧ ಮಾಹಿತಿ ಹಕ್ಕು ಆಯೋಗ ಶಿಸ್ತು ಕ್ರಮ ಜರುಗಿಸಿದೆ.

ಅರಕಲಗೂಡು ವ್ಯಾಪ್ತಿಯಲ್ಲಿ ಖರೀದಿ ಮಾಡಿದ್ದ ತಮ್ಮ ಪಿತ್ರಾರ್ಜಿತ ಆಸ್ತಿ ಕಸಬಾ ಹೋಬಳಿ ಕೆಲ್ಲೂರು ಗ್ರಾಮದಲ್ಲಿರುವ ಸರ್ವೇ ನಂಬರ್ 77/2ರಲ್ಲಿ 19 ಗುಂಟೆ ಮತ್ತು 77/10 ರಲ್ಲಿ 5 ಗುಂಟೆ ಬಾಬಿನಲ್ಲಿ ಕ್ರಯಪತ್ರದ ಮುಖಾಂತರ ಸೈಯದ್ ಜಿಯಾ ಉದ್ದೀನ್ ರವರ ಆಸ್ತಿಯನ್ನು ನಿಯಮವನ್ನು ಗಾಳಿಗೆ ತೂರಿ ಬೇರೆಯವರ ಹೆಸರಿಗೆ ಸರ್ವೇ ನಂಬರ್ 77/2ರ ಪೈಕಿ 19 ಗುಂಟೆ ಜಮೀನು ಬೇರೆಯವರ ಹೆಸರಿಗೆ ಖಾತೆ ಮಾಡಿ ಕೊಡಲಾಗಿತ್ತು. ಈ ಸಂಬಂಧ ಸೈಯ್ಯದ್ ಜಿಯಾ ಉದ್ದೀನ್ ಅವರು ಮಾಹಿತಿ ಹಕ್ಕು ಅಧಿನಿಯಮದಡಿ ಈ ಪ್ರಕ್ರಿಯೆಯ ಬಗ್ಗೆ ಆರ್‌ಟಿಐಗೆ ಅರ್ಜಿ ಸಲ್ಲಿಸಿದ್ದರು. ಸಹ ಯಾವುದೇ ಮಾಹಿತಿ ನೀಡದ ಕಾರಣ ಇತ್ತೀಚೆಗೆ ವರ್ಗಾವಣೆ ಆಗಿರುವ ತಹಶೀಲ್ದಾರ್ ರೇಣುಕುಮಾರ್ ಅವರಿಗೆ ರೂ 10 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News