ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ ನಿಷೇಧ ಕಾಯ್ದೆ ವಾಪಸ್: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್
ಮೈಸೂರು,ಡಿ.22: ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೂರಕ್ಕೆ ನೂರು ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಕಾಯ್ದೆ , ಈ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಒಪ್ಪುವುದಿಲ್ಲ. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 100 ಕ್ಕೆ ನೂರು ಈ ಕಾಯ್ದೆ ವಾಪಾಸ್ ಪಡೆಯುತ್ತೇವೆ ಎಂದು ನೂತನ ಮತಾಂತರ ಕಾಯ್ದೆ ಪ್ರತಿ ಹರಿದು ಎಂ.ಲಕ್ಷ್ಮಣ್ ಆಕ್ರೋಶ ವ್ಯಕ್ತಪಡಿಸಿದರು.
ಮತಾಂತರ ನಿಷೇಧ ಕಾಯ್ದೆ ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶದಲ್ಲಿ ಅಸ್ತಿತ್ವದಲ್ಲಿದೆ. ಗುಜರಾತ್ ನಲ್ಲಿ ಇದಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಯಾವ ವ್ಯಕ್ತಿ ತನ್ನ ಇಚ್ಚೆಗೆ ಅನುಗುಣವಾಗಿ ಧರ್ಮ ಅನುಸರಿಸುವ ಅವಕಾಶ ನೀಡಿದೆ. ಇದರಿಂದ ಮತ್ತೊಂದು ಕಾಯ್ದೆ ಅವಶ್ಯಕತೆ ಇಲ್ಲ. ಸಂವಿಧಾನದ ಪರಿಚ್ಚೇದ 25ರ ಪ್ರಕಾರ ಇದಕ್ಕೆ ಗುಜರಾತ್ ನಲ್ಲಿ ತಡೆಯಾಜ್ಞೆ ನೀಡಿದೆ. ಈ ಕಾಯ್ದೆಗೆ ಕಾಂಗ್ರೆಸ್ ವಿರೊಧ ಇದೆ. ಈ ದೇಶ ಯಾವುದೇ ಒಂದು ಧರ್ಮ ಆಚರಣೆಗೆ ಸೀಮಿತವಾದ ರಾಷ್ಟ್ರ ಅಲ್ಲ. ಬಿಜೆಪಿ ಜನಸಾಮಾನ್ಯರಿಗೆ ಕಿರುಕುಳ ನೀಡುವುದು. ಅಲ್ಪಸಂಖ್ಯಾತರನ್ನು, ಕ್ರಿಶ್ಚಿಯನ್ ಗುರಿಯಾಗಿರಿಸಿಕೊಂಡು ಈ ಕಾಯ್ದೆ ಜಾರಿಗೆ ತರಲು ಹೊರಟಿದೆ. ಇದರ ಉದ್ದೇಶ ರಾಜ್ಯದಲ್ಲಿ ಅಶಾಂತಿ ಉಂಟುಮಾಡಿ ಅವರ ವೈಪಲ್ಯ ಮುಚ್ವಿಕೊಳ್ಳುವುದು. ಅವರ ಭ್ರಷ್ಟಾಚಾರ ಮುಚ್ಚಿಕೊಳ್ಳುವ ಹುನ್ನಾರ ಎಂದು ಆರೋಪಿಸಿದರು.
ಉತ್ತರ ಪ್ರದೇಶ, ಗುಜರಾತ್ ಕಾಯ್ದೆ ಹಾಗೂ ನಮ್ಮ ರಾಜ್ಯದಲ್ಲಿ ತರಲು ಹೊರಟಿರುವುದು ಬಹಳ ವ್ಯತ್ಯಾಸ ಇದೆ. ಮತಾಂತರ ಗೊಳ್ಳುವವರು ಅವರ ಸಂಬಂಧಿಕರ ಅನುಮತಿ ಪಡೆಯಬೇಕು. ಯಾರು ಬೇಕಾದರೂ ಪ್ರಶ್ನೆ ಮಾಡಬಹುದು ಎಂಬ ಅಂಶ ಇದರಲ್ಲಿ ಇದೆ. ಇದು ಬಹಳ ಆತಂಕ ಸೃಷ್ಟಿ ಮಾಡುವಂತದ್ದು. ಈ ಹಿಂದೆ ಮತಾಂತರ ಆದವರು ಅರ್ಜಿ ಮೂಲಕ ಡಿಸಿ ಅವರಿಂದ ಸರ್ಟಿಫಿಕೇಟ್ ಪಡೆಯಬೇಕು ಎಂದು ಇದೆ. ಇದು ಕ್ರಿಶ್ಚಿಯನ್ ಸಮುದಾಯಕ್ಕೆ ಕಿರುಕುಳ ನೀಡಲು ಹೀಗೆ ಮಾಡಿದೆ ಎಂದು ಹೇಳಿದರು.
ಗೂಳಿಹಟ್ಟಿ ಶೇಖರ್ 15 ಸಾವಿರ ಜನರು ಮತಾಂತರ ಆಗಿದ್ದಾರೆ ಎಂದು ಸದನದಲ್ಲಿ ಹೇಳುತ್ತಾರೆ. ಚಿತ್ರದುರ್ಗದಲ್ಲಿ ಸ್ವಯಂ ಪ್ರೇರಿತವಾಗಿ 45 ಕುಟುಂಬಗಳು ಕಾನೂನಾತ್ಮಕವಾಗಿ ಮಾತ್ರ ಕನ್ವರ್ಟ್ ಆಗಿದ್ದಾರೆ. ಆದರೆ ಗೂಳಿಹಟ್ಟಿ ಶೇಖರ್ 15 ಸಾವಿರ ಜನ ಅಂತ ಹೇಳಿದ್ದಾರೆ. ಇದಕ್ಕೆಲ್ಲ ಅವಕಾಶ ಕೊಟ್ಟವರು ಯಾರು ಎಂದು ಪ್ರಶ್ನೆ ಮಾಡಿದರು.
ಜನವರಿ 9 ರಿಂದ ಮೇಕದಾಟು ಸಂಬಂಧ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಹಳೆಮೈಸೂರು ಭಾಗದಲ್ಲಿ ದೊಡ್ಡ ಆಂದೋಲನ ಮಾಡುವ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ಡಿ 23 ರಂದು ಡಿ.ಕೆ.ಶಿವಕುಮಾರ್ ತಲಕಾವೇರಿಗೆ ಬರಲಿದ್ದಾರೆ. 24 ರಂದು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿ ಕಾರ್ಯಕ್ರಮ ಪ್ರಾರಂಭವಾಗುತ್ತೆ. ಮೈಸೂರಿನಿಂದ ಹೋಗುವುದು ಪ್ಲ್ಯಾನ್ ಇತ್ತು. ಸದನದಲ್ಲಿ ಸಿದ್ದರಾಮಯ್ಯ ಇರುವುದರಿಂದ ಪ್ರೋಗ್ರಾಂ ಕ್ಯಾನ್ಸಲ್ ಆಗಿದೆ. ಜನವರಿ ಮೊದಲ ವಾರದಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಜಂಟಿಯಾಗಿ ಸಭೆ ನಡೆಸಲಿದ್ದಾರೆ ಎಂದರು.
ಸಿಟಿ ರವಿ ವಿರುದ್ಧ ಕೆಂಡಾಮಂಡಲರಾದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ನಿಮ್ಮ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು ಪಟ್ಟಿ ಮಾಡಿ ಹೇಳಿ ಸಿ ಟಿ ರವಿ. ನಿಮಗೆ ಮಾನ ಮರ್ಯಾದೆ ಇದ್ದರೆ ಪಟ್ಟಿ ಕೊಡಿ. ಚಿಕ್ಕಮಗಳೂರಿನಲ್ಲಿ ಎರಡು ಕೆರೆ ಅಭಿವೃದ್ಧಿಗೆ ನಿರಂತರವಾಗಿ ಅನುದಾನ ಪಡೆಯುತ್ತಿದ್ದೀರಾ. ಕಳೆದ ವರ್ಷ 40 ಕೋಟಿ ಅನುದಾನ ಪಡೆದಿದ್ದೀರಿ. ಏನು ಅಭಿವೃದ್ಧಿ ಮಾಡಿದ್ದೀರಿ ತಿಳಿಸಿ. ಮಾಧ್ಯಮದ ಮುಂದೆ ಬರೆದೆ ಹೋದರೆ ನೀವು ಕಳೆದು ಹೋಗುತ್ತೀರಾ. ಕಾಂಟ್ರವರ್ಸಿ ಸ್ಟೇಟ್ಮೆಂಟ್ ಗಳಿಂದ ಮಾತ್ರ ನಿಮ್ಮನ್ನ ಗುರುತು ಮಾಡುವುದು. ಮೇಕೆದಾಟು ವಿಚಾರದಲ್ಲಿ ನಿಮ್ಮ ನಿಲುವು ಏನು ತಿಳಿಸಿ ಎಂದು ಆಗ್ರಹಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಘಟನೆಗಳ ವಿಚಾರ. ಈ ಘಟನೆ ಕ್ರಿಯೇಟ್ ಮಾಡಿರೋದೇ ಬಿಜೆಪಿಯವರು. ಜನತೆಯನ್ನು ದಿಕ್ಕು ತಪ್ಪಿ ಕಲ್ಲೊಡಿಸಿ, ಮಸಿ ಬಳಿಸುವ ಕೆಲಸ ಮಾಡಿಸಿರೋದು ಅವರೆ. ಮುಖ್ಯ ವಿಚಾರಗಳು ಚರ್ಚೆಗೆ ಬರಬಾರದು ಎಂಬ ಕಾರಣಕ್ಕೆ ಈ ಕೆಲಸ ಮಾಡಿದ್ದಾರೆ. ಅದಿವೇಶನದ ಪಾವಿತ್ರ್ಯತೆ ಕಳೆದವರು ಬಿಜೆಪಿ. ಕಾಂಗ್ರೆಸ್ ನವರು ಮಾಡಿಸಿದ್ದಾರೆ ಎಂದು ಆರೋಪ ಮಾಡುತ್ತಿದ್ದೀರಿ. ನಾವು ಮಾಡಿದ್ದರೆ ನಮ್ಮನ್ನ ಗಲ್ಲಿಗೇರಿಸಿ ಎಂದು ಲಕ್ಷ್ಮಣ್ ಹೇಳಿದರು.