ಆನ್‍ಲೈನ್ ಗೇಮ್ ನಿಷೇಧ ಪ್ರಶ್ನಿಸಿ ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Update: 2021-12-22 16:34 GMT

ಬೆಂಗಳೂರು, ಡಿ.22: ರಾಜ್ಯದಲ್ಲಿ ಆನ್‍ಲೈನ್ ಗೇಮ್ ರದ್ದುಪಡಿಸಿ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದಿರುವ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ತೀರ್ಪುನ್ನು ಕಾಯ್ದಿರಿಸಿದೆ.

ಈ ಕುರಿತು ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಹಾಗೂ ಇತರೆ ಗೇಮಿಂಗ್ ಕಂಪೆನಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಅರ್ಜಿದಾರ ಪರ ವಕೀಲರು ಮತ್ತು ಅಡ್ವೊಕೇಟ್ ಜನರಲ್ ಅವರ ವಾದವನ್ನು ಆಲಿಸಿ ತೀರ್ಪುನ್ನು ಕಾಯ್ದಿರಿಸಿತು.

ಆನ್‍ಲೈನ್‍ನಲ್ಲಿ ಸ್ಕಿಲ್ ಮತ್ತು ಚಾನ್ಸ್ ಎರಡು ಬಗೆಯ ಆಟಗಳಿದ್ದು, ಸ್ಕಿಲ್ ಗೇಮ್‍ಗಳ ತಡೆಯುವಂತಿಲ್ಲ. ಆದರೂ, ಕರ್ನಾಟಕ ಸರಕಾರ ನಿಷೇಧಿಸಿರುವ ಗೇಮ್‍ನಲ್ಲಿ ಸ್ಕಿಲ್ ಕೂಡ ಸೇರಿಸಿರುವುದು ಸುಪ್ರೀಂಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News