ಮೈಸೂರಿನಲ್ಲಿ ಒಮೈಕ್ರಾನ್ ಮೊದಲ ಪ್ರಕರಣ ಪತ್ತೆ
Update: 2021-12-23 10:07 IST
ಮೈಸೂರು, ಡಿ.23: ಮೈಸೂರು ನಗರದಲ್ಲಿ ಮೊದಲ ಒಮೈಕ್ರಾನ್ ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಎಂ.ಪ್ರಸಾದ್ ದೃಢಪಡಿಸಿದ್ದಾರೆ.
ಹೊರದೇಶದಿಂದ ಮೈಸೂರಿಗೆ ಆಗಮಿಸಿ ಸದ್ಯ ಇಲ್ಲಿಯೇ ವಾಸ್ತವ್ಯವಿರುವ ಕಟುಂಬದ 9 ವರ್ಷದ ಮಗುವಿಗೆ ಒಮೈಕ್ರಾನ್ ತಗುಲಿದೆ. ಪ್ರಕರಣವನ್ನು ಪ್ರತ್ಯೆಕಿಸಲಾಗಿದ್ದು, ಇವರಿಗೆ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ, ಇವರ ಪ್ರಥಮ ಹಾಗೂ ದ್ವಿಥೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ತಪಾಸಣೆಗೆ ಒಳಪಡಿಸಲಾಗುವುದು ಎಂದವರು ತಿಳಿಸಿದ್ದಾರೆ.
ಸಾರ್ವಜನಿಕರು ಯಾವುದೇ ಆತಂಕಕಕ್ಕೊಳಗಾಗುವ ಅಗತ್ಯವಿಲ್ಲ. ಕೋವಿಡ್ ನಿಯಮಗಳನ್ನು ಪಾಲಿಸುವುದರ ಜೊತೆಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಎಂ.ಪ್ರಸಾದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.