×
Ad

ಹಲವು ಸಂಸ್ಥೆಗಳಿಂದ ಹೂಡಿಕೆದಾರರಿಗೆ ವಂಚನೆ: ವರದಿ ಸಲ್ಲಿಕೆಗೆ ಕಾಲಾವಕಾಶ ನೀಡಿದ ಹೈಕೋರ್ಟ್

Update: 2021-12-23 22:36 IST

ಬೆಂಗಳೂರು, ಡಿ.23: ಆ್ಯಂಬಿಡೆಂಟ್, ಅಜ್ಮೇರಾ ಗ್ರೂಪ್ಸ್ ಹಾಗೂ ಇಂಜಾಸ್ ಇಂಟರ್ ನ್ಯಾಷನಲ್ ಸೇರಿ ಹೂಡಿಕೆದಾರರಿಗೆ ವಂಚನೆ ಮಾಡಿದ ಆರೋಪ ಹೊತ್ತಿರುವ 9 ಸಂಸ್ಥೆಗಳ ವಿರುದ್ಧ ಸಕ್ಷಮ ಪ್ರಾಧಿಕಾರಗಳು ಕೈಗೊಂಡಿರುವ ವರದಿ ಸಲ್ಲಿಸಲು ಹೈಕೋರ್ಟ್ ರಾಜ್ಯ ಸರಕಾರಕ್ಕೆ 2 ವಾರ ಕಾಲಾವಕಾಶ ನೀಡಿದೆ.

ಈ ಕುರಿತಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರಕಾರದ ಪರ ವಕೀಲರು, ಪ್ರಾಧಿಕಾರದ ಅಧಿಕಾರಿಗಳು ಪದೇ ಪದೇ ಬದಲಾವಣೆ ಮತ್ತು ವರ್ಗಾವಣೆ ಆಗಿದ್ದಾರೆ. ಇದರಿಂದ, ಆಯಾ ಕಂಪೆನಿಗಳ ವಿಚಾರದಲ್ಲಿ ಸಕ್ಷಮ ಪ್ರಾಧಿಕಾರಗಳು ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸಲು ವಿಳಂಬವಾಗಿದೆ. 

ಎರಡು ವಾರ ಕಾಲಾವಕಾಶ ನೀಡಿದರೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ಸರಕಾರದ ಪರ ವಕೀಲರ ಮನವಿ ಪರಿಗಣಿಸಿದ ಪೀಠ, ಸಕ್ಷಮ ಪ್ರಾಧಿಕಾರಗಳ ವರದಿ ಸಲ್ಲಿಸಲು ಸರಕಾರಕ್ಕೆ ಎರಡು ವಾರ ಕಾಲಾವಕಾಶ ನೀಡಿ ವಿಚಾರಣೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News