×
Ad

ನನ್ನದು, ಈಶ್ವರಪ್ಪನದ್ದು ಲವ್ ಆ್ಯಂಡ್ ಹೇಟ್ ರಿಲೇಷನ್‍ಶಿಪ್ ಎಂದ ಸಿದ್ದರಾಮಯ್ಯ

Update: 2021-12-23 22:48 IST

ಬೆಳಗಾವಿ, ಡಿ. 23: ನನ್ನದು ಹಾಗೂ ಸಚಿವ ಕೆ.ಎಸ್.ಈಶ್ವರಪ್ಪನವರದ್ದು ಪ್ರೀತಿ ಮತ್ತು ದ್ವೇಷದ ಸಂಬಂಧ (ಲವ್ ಆಂಡ್ ಹೇಟ್) ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ ಪ್ರಸಂಗ ನಡೆಯಿತು.

ಗುರುವಾರ ವಿಧಾನಸಭೆಯಲ್ಲಿ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕದ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದ ವೇಳೆ ನನ್ನದು ಈಶ್ವರಪ್ಪನವರ ಸಂಬಂಧ ವಿಶೇಷ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ನಿಮ್ಮ ಹಾಗೂ ಈಶ್ವರಪ್ಪ ನಡುವಿನ ಸ್ನೇಹದ ಗುಟ್ಟೇನು ಎಂದು ಕಾಲೆಳೆದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಕಂದಾಯ ಸಚಿವ ಆರ್.ಅಶೋಕ್, ಪ್ರೀತಿ (ಲವ್) ಏಕೆ? ದ್ವೇಷ(ಹೇಟ್) ಏಕೆ? ಎಂದು ನಮಗೆಲ್ಲಾ ಹೇಳಿ ಎಂದು ಕಾಲೆಳೆದರು. ಅದು ನನಗೆ ಈಶ್ವರಪ್ಪನಿಗೆ ಅಷ್ಟೇ ಗೊತ್ತು ಎಂದು ಸಿದ್ದರಾಮಯ್ಯ ಚರ್ಚೆಗೆ ಇತಿಶ್ರೀ ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News