×
Ad

ಕೆಪಿಎಸ್‍ಸಿ: 2021ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳು ಮುಂದೂಡಿಕೆ

Update: 2021-12-24 20:37 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.24: ಕರ್ನಾಟಕ ಲೋಕಸೇವಾ ಆಯೋಗವು 2021ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷಾ ದಿನಾಂಕಗಳನ್ನು ಮುಂದೂಡಲಾಗಿದೆ.

ಪ್ರಥಮ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆಗಳು ಫೆ.19 ರಿಂದ 21ವರೆಗೆ, ದ್ವಿತೀಯ ಹಂತವಾಗಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಬೆಳಗಾವಿ, ಕಲಬುರಗಿ ವಿಭಾಗೀಯ ಕೇಂದ್ರಗಳಲ್ಲಿ ಫೆ.22ರಿಂದ 25 ಮತ್ತು ಫೆ.28 ಹಾಗೂ ಮಾ.2 ರಿಂದ 5ರವರೆಗೆ, ತೃತೀಯ ಹಂತವಾಗಿ ಬೆಂಗಳೂರು ಕೇಂದ್ರದಲ್ಲಿ ಮಾ.7ರಿಂದ 12 ಪರೀಕ್ಷಾ ದಿನಾಂಕಗಳನ್ನು ನಿಗದಿಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಆಯೋಗದ ವೆಬ್‍ಸೈಟ್ http://kpsc.kar.nic.in ಗೆ ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News