×
Ad

ವಿರಾಜಪೇಟೆ : ಹಾಲಿನ ವಾಹನ ಪಲ್ಟಿ; ಓರ್ವ ಮೃತ್ಯು

Update: 2021-12-26 17:44 IST

ಮಡಿಕೇರಿ ಡಿ.26 : ಮುಂಜಾನೆಯ ದಟ್ಟ ಮಂಜಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಾಲಿನ ವಾಹನ ಅಪಘಾತಕ್ಕೀಡಾಗಿ, ವ್ಯಕ್ತಿಯೊಬ್ಬರು  ದುರ್ಮರಣಕ್ಕೀಡಾದ ಘಟನೆ ವಿರಾಜಪೇಟೆ ತಾಲೂಕಿನ ಐಮಂಗಲ ಗ್ರಾಮದ ಬಿಳುಗುಂದ ಕ್ರಾಸ್‍ನಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮರೂರು ಗ್ರಾಮದ ನಿವಾಸಿ ಅಜಯ್ (32)ಸಾವನ್ನಪ್ಪಿರುವ ದುರ್ದೈವಿ. ಗಂಭೀರ ಸ್ವರೂಪದಲ್ಲ್ಲಿ ಗಾಯಗೊಂಡಿರುವ ವಾಹದಲ್ಲಿದ್ದ ಮುತ್ತುರಾಯನ ಹೊಸಳ್ಳಿ ಗ್ರಾಮದ ನಿವಾಸಿ ಮುತ್ತುರಾಜ್ ಹಾಗೂ ವಾಹನ ಚಾಲಕ ಕೂಡಿಗೆ ಗ್ರಾಮದ ನಿವಾಸಿ ಹರ್ಷ (30) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಸಂಬಂಧಸಿದಂತೆ ವೀರಾಜಪೇಟೆ ಗ್ರಾಮಾಂತರ ಪೊಲೀಸರು  ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News