ಕೆಲವು ಮೆಮು ರೈಲುಗಳ ಸಂಚಾರ ಸ್ಥಗಿತ

Update: 2021-12-28 12:14 GMT

ಬೆಂಗಳೂರು, ಡಿ.28: ನಾಯಂಡನಹಳ್ಳಿ ಯಾರ್ಡ್‍ನಲ್ಲಿ ಥಿಕ್‍ವೆಬ್ ಸ್ವಿಚ್‍ಗಳ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಈ ಮಾರ್ಗದಲ್ಲಿ ಚಲಿಸುತ್ತಿದ್ದ ಕೆಲ ರೈಲುಗಳ ಸೇವೆಯನ್ನು ರದ್ದುಪಡಿಸಲಾಗಿದೆ. 

ಮೈಸೂರಿನಿಂದ ಬರುವ ಮೈಸೂರು-ಕೆಎಸ್‍ಆರ್ ಬೆಂಗಳೂರು ಮೆಮು ರೈಲು(ರೈಲು ಸಂಖ್ಯೆ 06560) ಡಿ.30, ಜ.4 ಮತ್ತು 6ರಂದು ಸಂಚಾರ ನಡೆಸುವುದಿಲ್ಲ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಮೈಸೂರಿಗೆ ಚಲಿಸುವ ಮೆಮು ರೈಲು(ಸಂಖ್ಯೆ 06559) ಡಿ.31, ಜ.5 ಮತ್ತು 7ರಂದು ಸಂಚಾರ ನಡೆಸುವುದಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News