×
Ad

ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಪ್ರವೇಶ ಪಡೆಯಬಹುದು: ರಾಜ್ಯ ಪರೀಕ್ಷಾ ಪ್ರಾಧಿಕಾರ

Update: 2021-12-28 18:06 IST

ಬೆಂಗಳೂರು, ಡಿ.28: ಸರಕಾರದ ನಿರ್ದೇಶನದಂತೆ, ಸಿಇಟಿ-2021ನೆ ಸಾಲಿನ ಇಂಜಿನಿಯರಿಂಗ್, ಟೆಕ್ನಾಲಜಿ, ಆರ್ಕಿಟೆಕ್ಚರ್ ಹಾಗೂ ಕೃಷಿ ವಿಜ್ಞಾನ, ಫಾರ್ಮಸಿ, ಪಶುಸಂಗೋಪನೆ, ಬಿ.ಫಾರ್ಮ್, ನ್ಯಾಚುರೋಪತಿ ಮತ್ತು ಯೋಗ, ಬಿಎಸ್ಸಿ(ಆನರ್ಸ್) ಇತ್ಯಾದಿ ಕೋರ್ಸುಗಳ ಪ್ರವೇಶಾತಿಗೆ ಎರಡನೆ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಶುಲ್ಕವನ್ನು ಪಾವತಿಸಿ ಸಂಬಂಧಿಸಿದ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದಾಗಿದೆ.

ಡಿ.29ರಂದು ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡುವುದು ಮತ್ತು ಪ್ರವೇಶ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳುವುದು(ಹಿಂದಿನ ಸುತ್ತಿನಲ್ಲಿ ಶುಲ್ಕವನ್ನು ಪಾವತಿಸಿದ್ದರೆ ಈ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಹೊಂದಾಣಿಕೆ ಮಾಡಲಾಗುವುದು). ಡಿ.30ರಂದು ಸಂಜೆ 5.30ರವರೆಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News