×
Ad

ಎನ್. ಆರ್.ಪುರ: ಪ್ರಿಯಕರನ ಆತ್ಮಹತ್ಯೆಯಿಂದ ನೊಂದು ಪ್ರಿಯತಮೆಯೂ ಆತ್ಮಹತ್ಯೆ

Update: 2021-12-29 11:40 IST
ಸಾಂದರ್ಭಿಕ ಚಿತ್ರ (source: PTI)

ಚಿಕ್ಕಮಗಳೂರು, ಡಿ.29: ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೈದ ಪ್ರಿಯಕರನ ಸಾವಿನಿಂದ ನೊಂದು ಪ್ರಿಯತಮೆಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಎನ್. ಆರ್.ಪುರ ತಾಲೂಕಿನಲ್ಲಿ ನಡೆದಿರುವುದು ವರದಿಯಾಗಿದೆ.

ಎನ್.ಆರ್.ಪುರ ತಾಲೂಕಿನ ವಗಡೆ ಗ್ರಾಮದ ರಾಜೇಶ್(27) ಹಾಗೂ ಅವರ ಪ್ರಿಯತಮೆ ಅಳೆಹಳ್ಳಿ ಗ್ರಾಮದ ಚಾಂದಿನಿ(23) ಮೃತಪಟ್ಟವರಾಗಿದ್ದಾರೆ.

ಪರಸ್ಪರ ಸಂಬಂಧಿಗಳಾಗಿದ್ದ ರಾಜೇಶ್  ಹಾಗೂ ಚಾಂದಿನಿ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದು, ಇವರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಿದ್ದರೆಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ನೊಂದಿದ್ದ ರಾಜೇಶ್ ಡಿ.23ರಂದು ವಿಷ ಪದಾರ್ಥ ಸೇವಿಸಿದ್ದರೆನ್ನಲಾಗಿದೆ. ಗಂಬೀರ ಸ್ಥಿತಿಯಲ್ಲಿದ್ದ ರಾಜೇಶ್ ರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ರಾಜೇಶ್ ಸೋಮವಾರ ಕೊನೆಯುಸಿರೆಳೆದಿದ್ದರು.

ಪ್ರಿಯಕರನ ಸಾವಿನಿಂದ ತೀವ್ರವಾಗಿ ನೊಂದಿದ್ದ ಚಾಂದಿನಿ ಮಂಗಳವಾರ ಅಳೆಹಳ್ಳಿಯ ತನ್ನ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.

ಈ ಬಗ್ಗೆ ಎನ್.ಆರ್.ಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News