×
Ad

ದಾವಣಗೆರೆ: ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಲೈನ್ ಮ್ಯಾನ್

Update: 2021-12-29 18:09 IST

ದಾವಣಗೆರೆ: ಲಂಚ ಸ್ವೀಕರಿಸುವಾಗ ಲೈನ್ ಮ್ಯಾನ್ ಓರ್ವ ಎಸಿಬಿ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.

ದಾವಣಗೆರೆಯ ಬೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಕಚೇರಿಯ ಎಂಟಿ ಉಪವಿಭಾಗದ ಲೈನ್ ಮ್ಯಾನ್ ರವಿಕುಮಾರ್  5 ಸಾವಿರ ರೂ. ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ರವಿಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ.

ದಾವಣಗೆರೆಯ ಶ್ರಿರಾಮ್ ಎಂಬುವರು  ಹಿಟ್ಟಿನ ಗಿರಣಿಯ ಹಿಂಬಾಕಿ ಬಿಲ್ ಗೆ 15 ಸಾವಿರ ರೂ. ದಂಡ ಪಾವತಿಸಬೇಕಿತ್ತು. ಶ್ರೀರಾಮ್ ಎನ್ನುವರಿಗೆ ದಂಡವನ್ನು ಸರಿಪಡಿಸಲು ರವಿಕುಮಾರ್ ಐದು ಸಾವಿರ ಬೇಡಿಕೆ ಇಟ್ಟಿದ್ದರು. ಹಿಟ್ಟಿನ ಗಿರಣಿ ಮಾಲಕ ಶ್ರೀರಾಮ್ ಎಸಿಬಿ ಗೆ ದೂರು ಸಲ್ಲಿಸಿದ್ದರು. 

ಶ್ರೀರಾಮ್ ದೂರಿನಂತೆ ಬುಧವಾರ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News