×
Ad

ಡಿ.31ರ ಕರ್ನಾಟಕ ಬಂದ್‍ಗೆ ರೈತ ಸಂಘ ಬೆಂಬಲ: ಕೋಡಿಹಳ್ಳಿ ಚಂದ್ರಶೇಖರ್

Update: 2021-12-29 18:15 IST

ಬೆಂಗಳೂರು, ಡಿ.29: ನಾಡಿಗೆ ಅಗೌರವವನ್ನು ಉಂಟು ಮಾಡಿದ ಎಂಇಎಸ್ ಸಂಘಟನೆಯನ್ನು ರಾಜ್ಯದಿಂದ ಉಚ್ಛಾಟನೆ ಮಾಡಲು ಕನ್ನಡ ಪರ ಸಂಘಟನೆಗಳು ಡಿ.31ಕ್ಕೆ ಕರ್ನಾಟಕ ಬಂದ್ ಮಾಡಲು ಕರೆದಿರುವ ಕರೆಗೆ ರಾಜ್ಯ ರೈತ ಸಂಘವು ಬೆಂಬಲ ನೀಡುತ್ತಿದೆ ಎಂದು ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. 

ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಂಇಎಸ್ ಪುಂಡಾಟಿಕೆಯು ಮಿತಿಮೀರಿದೆ. ಆದದರಿಂದ ರಾಜ್ಯದಲ್ಲಿ ನಾಡಿಗೆ ಅಪಮಾನ ಎಸಗಿದ ಸಂಘಟನೆಗಳನ್ನು ನಿರ್ಬಂಧಿಸಬೇಕು. ಹಾಗಾಗಿ ಕನ್ನಡಪರ ಸಂಘಟನೆಗಳು ನೀಡಿರುವ ಬಂದ್‍ಗೆ ಕನ್ನಡಿಗರು ಬೆಂಬಲ ನೀಡಬೇಕು ಎಂದು ಹೇಳಿದರು.

ಇನ್ನು ರಾಜ್ಯ ಸರಕಾರವು ಜಾರಿಗೊಳಿಸಿದ ಕೃಷಿ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಜಾರಿಗೊಳಿಸಿದ ಯಾವ ಯೋಜನೆಗಳು ರೈತರ ಪರವಾಗಿಲ್ಲ. ಆದುದರಿಂದ ಕೇಂದ್ರ ಸರಕಾರವು ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಂಡಿತು. ಹಾಗಾಗಿ ರಾಜ್ಯದಲ್ಲಿಯೂ ಕೃಷಿ ವಿವಾಧಿತ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News