ನೈಟ್ ಕರ್ಫ್ಯೂಗೆ ಉದ್ಯಮ ವಲಯ ವಿರೋಧ: ಕೋವಿಡ್ ಕಂಟೈನ್ಮೆಂಟ್ ಕ್ರಮಗಳ ಮರುಪರಿಶೀಲನೆ; ಸಿಎಂ ಬೊಮ್ಮಾಯಿ

Update: 2021-12-29 16:56 GMT

ಹುಬ್ಬಳ್ಳಿ, ಡಿ. 29: ಉದ್ಯಮ ವಲಯದ ವಿರೋಧದ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಸೇರಿದಂತೆ ತನ್ನ ಸರಕಾರ ಘೋಷಿಸಿದ ಕೋವಿಡ್ ಕಂಟೈನ್ಮೆಂಟ್ ಕ್ರಮಗಳನ್ನು ಮರು ಪರಿಶೀಲಿಸುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಲ್ಲಿ ಬುಧವಾರ ಸೂಚನೆ ನೀಡಿದ್ದಾರೆ.

ಕೋವಿಡ್ ಇನ್ನಷ್ಟು ಹರಡುವುದನ್ನು ನಿಯಂತ್ರಿಸಲು ಕಂಟೈನ್ಮೆಂಟ್ ಕ್ರಮಗಳ ಭಾಗವಾಗಿ ಸರಕಾರ ರಾಜ್ಯಾದ್ಯಂತ ಮಂಗಳವಾರ ರಾತ್ರಿ ಜಾರಿಗೆ ಬರುವಂತೆ 10 ದಿನಗಳ ರಾತ್ರಿ ಕರ್ಫ್ಯೂ ಘೋಷಿಸಿತ್ತು. ಈ ಕರ್ಫ್ಯೂ ಜನವರಿ 7ರಂದು ಮುಂಜಾನೆ ವರೆಗೆ ಪ್ರತಿ ದಿನ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಗೆ ಜಾರಿಯಲ್ಲಿರಲಿದೆ. ಈ ಸಂದರ್ಭ ಯಾವುದೇ ಚಟುವಟಿಕೆಗಳಿಗೆ ಅನುಮತಿ ನೀಡಿಲ್ಲ.

ರಾತ್ರಿ ಕರ್ಫ್ಯೂಗೆ ವಿರೋಧ ವ್ಯಕ್ತವಾದ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ ‘‘ನಾನು ಎಲ್ಲರನ್ನೂ ಗಮನಿಸುತ್ತಿದ್ದೇನೆ. ನೋಡೋಣ, ನಾಳೆ ಬೆಂಗಳೂರಿಗೆ ಹೋದ ಬಳಿಕ ಇದಕ್ಕೆ ಸಂಬಂಧಿಸಿ ನಿರ್ಧಾರ ತೆಗೆದುಕೊಳ್ಳಲಿದ್ದೇನೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News