ಹಿಂದೂ ದೇವಾಲಯಗಳನ್ನು ಕಾನೂನು, ನಿಯಮಗಳಿಂದ ಸ್ವತಂತ್ರ ಮಾಡುತ್ತೇವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ: ಹಿಂದೂ ದೇವಾಲಯಗಳನ್ನು ಕಾನೂನು ಮತ್ತು ನಿಯಮಗಳಿಂದ ಮುಕ್ತಗೊಳಿಸುವ ಉದ್ದೇಶದಿಂದ ರಾಜ್ಯ ಸರಾಕಾರ ಕಾನೂನನ್ನು ತರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೂ ದೇವಾಲಯಗಳು ಇಂತಹ ನಿಯಂತ್ರಣ ಮತ್ತು ಕಾನೂನುಗಳಿಂದ ಮುಕ್ತವಾಗಬೇಕೆಂಬುದು ನಮ್ಮ ಹಿರಿಯರ ಆಶಯವಾಗಿದೆ ಎಂದು ತಿಳಿಸಿದರು.
ಬಜೆಟ್ ಅಧಿವೇಶಕ್ಕೂ ಮೊದಲೇ ನಮ್ಮ ಸರ್ಕಾರ ಈ ಕಾನೂನನ್ನು ತರಲಿದೆ ಎಂದು ನಾನು ಈ ಕಾರ್ಯಕಾರಿಣಿಗೆ ಹೇಳಲು ಬಯಸುತ್ತೇನೆ ಎಂದ ಅವರು, ನಾವು ನಮ್ಮ ದೇವಾಲಯಗಳನ್ನು ಅಂತಹ ಕಾನೂನು ಮತ್ತು ಷರತ್ತುಗಳಿಂದ ಮುಕ್ತಗೊಳಿಸುತ್ತೇವೆ. ಇವುಗಳಿಗೆ ಸರ್ಕಾರದ ನಿಯಂತ್ರಣವನ್ನು ಹೊರತುಪಡಿಸಿ ಬೇರೇ ಯಾವುದೇ ನೀತಿ ನಿಯಮಗಳು ಇರುವುದಿಲ್ಲ, ಮತ್ತು ಅದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಿದೆ ಎಂಬುದನ್ನು ನಾವು ಖಚಿತಪಡಿಸುತ್ತೇವೆ ಎಂದು ತಿಳಿಸಿದರು.
'ಮತಾಂತರ ನಿಷೇಧ ಮಸೂದೆ ಜಾರಿಗೆ ತರಲು ಸರ್ಕಾರ ವಿಶೇಷ ಕಾರ್ಯಪಡೆಯನ್ನು ರಚಿಸಲಿದೆ' ಎಂದು ಇದೇ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.