ಚಾಮರಾಜನಗರ: 6 ನೇ ವಾರ್ಡ್ ನಲ್ಲಿ ಎಸ್ ಡಿ ಪಿ ಐ ಅಭ್ಯರ್ಥಿಗೆ ಜಯ

Update: 2021-12-30 04:39 GMT

ಚಾಮರಾಜನಗರ : ಇಲ್ಲಿನ ನಗರಸಭೆಯ 6 ನೇ ವಾರ್ಡ್ ನ ಉಪ ಚುನಾವಣೆಯಲ್ಲಿ ಎಸ್ ಡಿ ಪಿ ಐ ಅಭ್ಯರ್ಥಿ ಜಯಗಳಿಸಿದ್ದಾರೆ.

ಚಾಮರಾಜನಗರ ನಗರಸಭೆಯ 6 ನೇ ವಾರ್ಡಿನ ಉಪ ಚುನಾವಣೆಯಲ್ಲಿ ಎಸ್ ಡಿ ಪಿ ಐ ಅಭ್ಯರ್ಥಿ ಅಪ್ಸರ್ ಪಾಷರವರು 651 ಮತಗಳನ್ನು ಗಳಿಸುವ ಮೂಲಕ ಭರ್ಜರಿ ಜಯಗಳಿಸಿದರು.

ಎಸ್ ಡಿ ಪಿ ಐ ಅಭ್ಯರ್ಥಿ ಅಪ್ಸರ್ ಪಾಷ ರವರು ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಅತಿಕ್ ರವರ ವಿರುದ್ಧ 252 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ನಗರಸಭೆಯ 6 ನೇ ವಾರ್ಡ್ ನಲ್ಲಿ ಈ ಹಿಂದೆ ಎಸ್ ಡಿ ಪಿ ಐ ಯಿಂದ ಸಮೀವುಲ್ಲಾ ರವರು ಆಯ್ಕೆಯಾಗಿದ್ದರು. ಅವರ ಅಕಾಲಿಕ ನಿಧನದಿಂದ ಬಂದ ಉಪ ಚುನಾವಣೆಯಲ್ಲಿ ಮತ್ತೆ 6ನೆ ವಾರ್ಡ್ ಎಸ್ ಡಿ ಪಿ ಐ ಪಾಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News