ದೇವಾಲಯಗಳ ಆಡಳಿತದಲ್ಲಿ ಸರಕಾರದ ಹಸ್ತಕ್ಷೇಪ ಸರಿಯಲ್ಲ: ಸಿ.ಟಿ.ರವಿ

Update: 2021-12-30 14:05 GMT

ಚಿಕ್ಕಮಗಳೂರು, ಡಿ.30: ಮುಸ್ಲಿಮರಿಗೆ ವಕ್ಫ್ ಮಂಡಳಿ ಇದೆ. ಕ್ರಿಶ್ಚಿಯನ್ನರಿಗೆ ಅವರದೇ ಆದ ಧಾರ್ಮಿಕ ಮಂಡಳಿ ಇದೆ. ಅಲ್ಲಿ ಸರಕಾರ ಹಸ್ತಕ್ಷೇಪ ಮಾಡಲ್ಲ. ಹಾಗಿದ್ದಲ್ಲಿ ಹಿಂದೂಗಳ ದೇವಾಲಯಕ್ಕೆ ಸರಕಾರದ ಹಸ್ತಕ್ಷೇಪ ಏಕೆ? ಹಿಂದೂವಾಗಿ ಹುಟ್ಟಿದ್ದೇ ತಪ್ಪು ಎಂದು ಯಾರಿಗೂ ಅನಿಸಬಾರದು ಈ ನಿಟ್ಟಿನಲ್ಲಿ ದೇವಾಲಯಗಳ ಆಡಳಿತದಲ್ಲಿ ಹಸ್ತಕ್ಷೇಪ ಇರಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾರೋ ತಿಳಿದಿಲ್ಲ, ನನಗೆ ಮೇಸೆಜ್ ಮಾಡಿದ್ದರು. ಕರೆಂಟ್ ಬಿಲ್‍ಗಳಲ್ಲೂ ಮಸೀದಿ, ದೇವಸ್ಥಾನಕ್ಕೆ ಒಂದೊಂದು ರೇಟ್ ವಿಧಿಸಿ ತಾರತಮ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದು ಎಷ್ಟು ಸತ್ಯವೋ, ಸುಳ್ಳೋ ಪರಿಶೀಲನೆ ಮಾಡಬೇಕು. ಈ ಸಂಬಂಧ ಇಂಧನ ಸಚಿವ ಸುನೀಲ್ ಅವರಿಗೆ ದೂರವಾಣಿ ಕರೆ ಮಾಡಿದ್ದೆ. ಅವರು ಸಂಪರ್ಕಕ್ಕೆ ಸಿಗಲಿಲ್ಲ. ಎಷ್ಟು ವಿದ್ಯುತ್ ಉಪಯೋಗಿಸುತ್ತಾರೋ ಅಷ್ಟು ಬಿಲ್ ಪಡೆಯಬೇಕು. ಮಂದಿರ, ಮಸೀದಿ, ದೇವಾಲಯಗಳಿಗೆ ವಿದ್ಯುತ್ ಬಿಲ್ ವಿಧಿಸಬೇಕು. ಈ ತಾರತಮ್ಯ ಸರಿಯಲ್ಲ ಎಂದರು.

ದೇವಸ್ಥಾನಗಳು ಸಮಾಜದ ಸ್ವತ್ತು, ದೇಶಾದ್ಯಂತ ದೇವಾಲಯಗಳ ಸಂಪತ್ತು ಸಮಾಜದ ಏಳಿಗೆಗೆ ಉಪಯೋಗವಾಗಬೇಕು. ದೇವಸ್ಥಾನಗಳಿಗೆ ಭಕ್ತರು ದಾನ ದತ್ತಿ ನೀಡಿರುತ್ತಾರೆ, ಭಾವನೆ ಬೆರೆಸಿ ಕಾಣಿಕೆ ಹಾಕಿರುತ್ತಾರೆ. ಈ ದೃಷ್ಟಿಯಿಂದ ದೇವಾಲಯಗಳಲ್ಲಿ ಸರಕಾರದ ಹಸ್ತಕ್ಷೇಪ ಸರಿಯಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News