ಜ.1ರಿಂದ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಟಿಕೆಟ್ ದರದಲ್ಲಿ ಏರಿಕೆ
Update: 2021-12-30 23:25 IST
ಬೆಂಗಳೂರು, ಡಿ.30: ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಟಿಕೆಟ್ ದರವನ್ನು ಜ.1ರಿಂದ ಹೆಚ್ಚಳ ಮಾಡಿ, ಆದೇಶ ಹೊರಡಿಸಲಾಗಿದೆ.
ಮೃಗಾಲಯದ ಟಿಕೆಟ್ ದರವನ್ನು ವಯಸ್ಕರಿಗೆ 100ರೂ., ಮಕ್ಕಳಿಗೆ 50ರೂ. ಹಾಗೂ ಹಿರಿಯ ನಾಗರಿಕರಿಗೆ 60ರೂ.ಗಳಿಗೆ ಏರಿಕೆ ಮಾಡಿ ನಿಗದಿಪಡಿಸಲಾಗಿದೆ. ಚಿಟ್ಟೆ ಪಾರ್ಕ್‍ಗೆ ವಯಸ್ಕರಿಗೆ 50ರೂ., ಮಕ್ಕಳಿಗೆ 30ರೂ. ಹಾಗೂ ಹಿರಿಯ ನಾಗರಿಕರಿಗೆ ರೂ.30 ಟಿಕೆಟ್ ದರ ನಿಗದಿ ಪಡಿಸಲಾಗಿದೆ.
ನಾನ್ ಎಸಿ ಬಸ್ ಸಫಾರಿಗೆ ಟಿಕೆಟ್ ದರಗಳು ಸೋಮವಾರದಿಂದ ಶುಕ್ರವಾರದವರೆಗೆ ವಯಸ್ಕರಿಗೆ 330ರೂ., ಮಕ್ಕಳಿಗೆ 180ರೂ. ಮತ್ತು ಹಿರಿಯ ನಾಗರಿಕರಿಗೆ 230ರೂ. ನಿಗದಿ ಪಡಿಸಲಾಗಿದೆ. ಶನಿವಾರ ಮತ್ತು ಭಾನುವಾರದಂದು ವಯಸ್ಕರಿಗೆ 380ರೂ., ಮಕ್ಕಳಿಗೆ 230ರೂ. ಹಾಗೂ ವಯಸ್ಕರಿಗೆ 280 ರೂ.ಗಳಿಗೆ ಏರಿಕೆ ಮಾಡಲಾಗಿದೆ.