ಮೈಸೂರು: ನಂದಿನಿ ಕಲಬೆರಕೆ ತುಪ್ಪದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದರೆ ವಜಾಗೊಳಿಸಿ: ಬಡಗಲಪುರ ನಾಗೇಂದ್ರ ಒತ್ತಾಯ

Update: 2021-12-30 18:24 GMT

ಮೈಸೂರು: ಮೈಸೂರಿನಲ್ಲಿ ನಡೆದಿದೆ ಎನ್ನಲಾದ ಕಲಬೆರೆಕೆ ನಂದಿನಿ ತುಪ್ಪಕ್ಕೆ ಸಂಬಂಧಿಸಿದಂತೆ ಕೆ.ಎಂ.ಎಫ್ ಅಧಿಕಾರಿಗಳು ಶಾಮೀಲಾಗಿರುವ ಅನುಮಾನ ಮೂಡಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತರ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ಪ್ರತಿಭಟನೆ ವೇಳೆ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆದ ಕಲಬೆರೆಕೆ ತುಪ್ಪ ವಿಶ್ವಾಸಕ್ಕೆ ಧಕ್ಕೆ ತಂದಿದೆ. ಇದಕ್ಕೆ ಸರ್ಕಾರ ಮತ್ತು ಕೆ.ಎಂ.ಎಫ್ ಆಡಳಿತ ಮಂಡಳಿ ಹೊಣೆಯಾಗಿದೆ ಎಂದು ಹೇಳಿದರು.

 ಪ್ರಕರಣದಲ್ಲಿ ದಂಧೆ ಕೋರರು ಸಿಕ್ಕಿರಬಹುದು. ಅವರ ಮೇಲೆ ಪ್ರಕರಣ ದಾಖಲಾಗಿರಬಹುದು. ಆದರೆ ದಂಧೆಕೋರರ ಜೊತೆಗೆ ಆಡಳಿತ ಮಂಡಳಿಯ ಕೆಲವರು ಮತ್ತು ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ. ಹಾಗಾಗಿ ಸಿಬಿಐ ನಂತಹ ಸಮಗ್ರ ತನಿಖೆ ಯಾಗಬೇಕು ಎಂದು ಒತ್ತಾಯಿಸಿದರು.

 ಬರೀ ತಪ್ಪಿತಸ್ಥರ ವಿರುದ್ಧ ಶಿಕ್ಷೆಯಾಗುವುದಲ್ಲ, ಯಾರು ಕಾರಣ ಅದು ಸಾರ್ವಜನಿಕರಿಗೆ ಗೊತ್ತಾಗಬೇಕು. ಯಾಕೆಂದರೆ ಕೆ.ಎಂ.ಎಫ್. ರೈತರ ಉತ್ಪಾದಕ ಸಂಸ್ಥೆಯಿಂದ ರೂಪುಗೊಂಡಿರುವ ಸಂಸ್ಥೆ ಎಂದು ಹೇಳಿದರು. 

ಸಹಕಾರ ಸಂಘದ ವ್ಯವಸ್ಥೆಯಲ್ಲಿ ನಂದಿನಿ ನಡೆಯುತ್ತಿದೆ. ಇದಕ್ಕೆ ಧಕ್ಕೆ ತರುವಂತಹ ಕೆಲಸವನ್ನು ಕೆಲವು ಖಾಸಗಿಯವರು ಮಾಡಿರಬಹುದು. ಅವರ ಉತ್ಪವನ್ನು ಉತ್ಕೃಷ್ಟ ಗುಣದಿಂದ ಕೊಡುತ್ತೇವೆ ಎಂದು ಈ ಪ್ರಕರಣಕ್ಕೆ ಕಾರಣರಗಿರಬಹುದು. ಆದರೂ ಈ ಪ್ರಕರಣದ ಸಮಗ್ರ ತನಿಖೆಯಾಗಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News