×
Ad

ಗದಗ: ಉಮರ್ ಫಾರೂಕ್ ಮೀರಾನಾಯಕ್ ರಿಗೆ ಪಿ.ಎಚ್.ಡಿ ಪದವಿ

Update: 2022-11-18 11:35 IST
Byline : Ashwani

ಗದಗ, ನ.18: ರೋಣ ನಗರದ ನಿವಾಸಿ ಉಮರ್ ಫಾರೂಕ್ ಜೆ. ಮೀರಾನಾಯಕ್ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ.

 ಉಮರ್ ಫಾರೂಕ್ ಮಂಡಿಸಿದ 'ಎಕ್ಸ್ ಪ್ಲೊರೇಶನ್ ಆಫ್ ಮೈಕ್ರೊಅಲ್ಗಲ್ ಬಯೊಡೈವರ್ಸಿಟಿ ಫ್ರಮ್ ಸೆಲೆಕ್ಟೆಡ್ ರೀಜನ್ಸ್ ಆಫ್ ವೆಸ್ಟರ್ನ್ ಘಾಟ್ಸ್ ಆ್ಯಂಡ್ ಇವ್ಯಾಲ್ಯುವೇಶನ್ ಆಫ್ ದೇರ್ ಬಯೊಮೆಡಿಕಲ್ ಅಪ್ಲಿಕೇಶನ್ಸ್' ಎಂಬ ಸಂಶೋಧನಾ ಮಹಾ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪ್ರದಾನ ಮಾಡಲಾಗಿದೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಅಸೋಸಿಯೇಟೆಡ್ ಪ್ರೊಫೆಸರ್ ಶಿವಶರಣ ಸಿ.ಟಿ. ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಮಂಡಿಸಿದ್ದಾರೆ.

ಇವರು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಪಾಚಿಗಳ ವೈವಿಧ್ಯ ಹಾಗೂ ಅವುಗಳ ವೈದ್ಯಕೀಯ ಅನುಕೂಲಗಳ ಕುರಿತು ಸಂಶೋಧನೆ ಮಾಡಿದ್ದರು ಹಾಗೂ ಹೊಸ ಬಗೆಯ ಪಾಚಿಯೊಂದನ್ನು ಕಂಡು ಹಿಡಿದಿದ್ದು ಅಂತರಾಷ್ಟ್ರೀಯ ನಿಯತಕಾಲಿಕೆಯಲ್ಲಿ ಅದನ್ನು ಪ್ರಕಟಿಸಿದ್ದರು. ರೋಣ ನಗರದ ವಿ.ಎಫ್. ಪಾಟೀಲ ಪ್ರೌಡಶಾಲೆಯ ವಿದ್ಯಾರ್ಥಿಯಾಗಿದ್ದ ಇವರಿಗೆ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿದ್ದವು. ಇದುವರೆಗೆ ಇವರ ಆರು ಸಂಶೋಧನಾ ಪ್ರಬಂಧಗಳು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

Byline - Ashwani

contributor

Similar News