×
Ad

ಗದಗ ನೂತನ ಎಸ್ಪಿಯಾಗಿ ಬಿ.ಎಸ್.ನ್ಯಾಮೇಗೌಡ ನೇಮಕ

Update: 2022-12-21 17:01 IST
Byline : Ashwani

ಬೆಂಗಳೂರು, ಡಿ.21: ಲೋಕಾಯುಕ್ತ ಎಸ್ಪಿಯಾಗಿದ್ದ ಬಿ.ಎಸ್.ನ್ಯಾಮೇಗೌಡ ಅವರನ್ನು ಗದಗ ಜಿಲ್ಲಾ ಎಸ್ಪಿಯಾಗಿ ರಾಜ್ಯ ಸರಕಾರ ವರ್ಗಾವಣೆ ಮಾಡಿದೆ.

ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದ್ದು, ಗುಪ್ತಚರ ಇಲಾಖೆಯ ಎಸ್ಪಿಯಾಗಿ ಆರ್.ಚೇತನ್, ಮೈಸೂರು ಜಿಲ್ಲಾ ಎಸ್ಪಿಯಾಗಿ ಸೀಮಾ ಲಾಟ್ಕರ್, ಬೆಂಗಳೂರು ಅಪರಾಧ ವಿಭಾಗದ ಎಐಜಿಪಿಯಾಗಿ ಶಿವಪ್ರಕಾಶ್ ದೇವರಾಜು, ಮೈಸೂರು ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ಮುತ್ತರಾಜ್.ಎಂ, ಗದಗ ಎಸ್ಪಿಯಾಗಿ ಬಾಬಾಸಾಬ್ ನ್ಯಾಮಗೌಡ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. 

Byline - Ashwani

contributor

Similar News