ಸ್ವಪಕ್ಷೀಯರಿಂದಲೇ ನನ್ನ ವಿರುದ್ಧ ಪಿತೂರಿ: ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಆಕ್ರೋಶ

Update: 2022-01-02 06:10 GMT

ಚಿಕ್ಕಮಗಳೂರು, ಜ.2: ನಮ್ಮ ಪಕ್ಷದವರೇ ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ನಾನು ಕಾಂಗ್ರೆಸ್ ಸೇರುತ್ತೇನೆಂಬುದಾಗಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸ್ವ-ಪಕ್ಷದ ಮುಖಂಡರ ವಿರುದ್ಧ ಮೂಡಿಗೆರೆ ಬಿಜೆಪಿ ಶಾಸಕ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ನಾನೇಕೆ ಕಾಂಗ್ರೆಸ್ ಪಕ್ಷ ಸೇರಲಿ ? ನಾನು ಪಕ್ಷ ನಿಷ್ಠ. ಬಿಜೆಪಿ ಮುಖಂಡರು, ಪಕ್ಷ ನನ್ನನ್ನ ಚೆನ್ನಾಗಿ ನೋಡಿಕೊಂಡಿದೆ. ನಾನು ಕಾಂಗ್ರೆಸ್ ಸೇರುತ್ತೇನೆ ಎಂಬುದು ಸುಳ್ಳು, ಇದನ್ನ ಯಾರೂ ನಂಬುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

ಸಂಪುಟ ಪುನರ್ ರಚನೆ, ನಿಗಮ ರಚನೆ ನೀಡುವ ಸಮಯದಲ್ಲಿ ಮಾತ್ರ ಸಮಯದಲ್ಲಿ ಮಾತ್ರ ನಾನು ಕಾಂಗ್ರೆಸ್ ಸೇರುತ್ತೇನೆಂಬ ಅಪಪ್ರಚಾರ ಮಾಡಲಾಗುತ್ತಿದೆ. ನಾನು ಎಲ್ಲಿಯೂ ಬೋರ್ಡ್, ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿಲ್ಲ. ಆದರೂ ಈ ರೀತಿ ಸುದ್ದಿ ಹೊರಬರುತ್ತಿದೆ. ಇದನ್ನ ವಿರೋಧ ಪಕ್ಷದವರಿಗಿಂತ ನಮ್ಮ ಪಕ್ಷದವರೇ ಮಾಡುತ್ತಿದ್ದಾರೆ ಎಂದು ಎಂ.ಪಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News