×
Ad

ಮೈಸೂರು: ಕಾಂಗ್ರೆಸ್ ನಿಂದ ನೀರಿಗಾಗಿ ನಡಿಗೆ

Update: 2022-01-03 14:13 IST

ಮೈಸೂರು, ಜ.3: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಜನಾಂದೋಲನ ಸಮಾವೇಶದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸಿದ ಕಾಂಗ್ರೆಸ್ ಪಕ್ಷದ ನಾಯಕರು ನೀರಿಗಾಗಿ ನಡಿಗೆ ಬೃಹತ್ ಪಾದಯಾತ್ರೆ ನಡೆಸಿದರು.

ನಗರದ ಗನ್ ಹೌಸ್ ವೃತ್ತದಲ್ಲಿರುವ ಬಸವೇಶ್ವರ ಪುತ್ತಳಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಾಲಾರ್ಪಣೆ ಮಾಡಿ ನಡಿಗೆಗೆ ಚಾಲನೆ ನೀಡಿದರು.

ನಂತರ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ನೂರಡಿ ರಸ್ತೆ, ರಾಮರಾಸ್ವಮಿ ವೃತ್ತ, ಜೆಎಲ್ ಬಿ ರಸ್ತೆ ಮೂಲಕ ರೈಲ್ವೆ ನಿಲ್ದಾಣದ ಬಳಿ ಇರುವ ಕಾಂಗ್ರಸ್ ಭವಕ್ಕೆ ಪಾದಯಾತ್ರೆ ಮೂಲಕ ಆಗಮಿಸಿದರು.

ಪಾದಯಾತ್ರೆಯಲ್ಲಿ ಬ್ಯಾಂಡ್ ಸೆಟ್, ನಗಾರಿ, ಚಂಡೇ ವಾದ್ಯ, ಕೇರಳ ಕುಣಿತ, ಕೀಲುಗೊಂಬೆ ಸೇರಿದಂತೆ ವಿವಿಧ ಕಲಾಪ್ರಕಾರಗಳು ಗಮನ ಸೆಳೆದವು.

ಈ ನಡಿಗೆಯಲ್ಲಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್, ಶಾಸಕರುಗಳಾದ ಡಾ.ಯತೀಂದ್ರ ಸಿದ್ದರಾಮಯ್ಯ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಮಾಜಿ ಶಾಸಕರುಗಳಾದ ವಾಸು, ಎಂ.ಕೆ‌.ಸೋಮಶೇಖರ್, ಕಳಲೆ ಕೇಶವಮೂರ್ತಿ, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಪುಷ್ಪ ಅಮರ್ ನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್‌.ಮೂರ್ತಿ, ಜಿಲ್ಲಾ  ಕಾಂಗ್ರೆಸ್  ಅಧ್ಯಕ್ಷ ಡಾ‌.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಲಕ್ಷ್ಮಣ್, ಹರೀಶ್ ಗೌಡ, ಶ್ರೀನಾಥ್ ಬಾಬು, ಮಳವಳ್ಳಿ ಶಿವಣ್ಣ,  ಪುಷ್ಪವಲ್ಲಿ, ಮಾಧ್ಯಮ ವಕ್ತಾರ ಮಹೇಶ್, ಟಿ.ಬಿ.ಚಿಕ್ಕಣ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News