ಚಿಕ್ಕಬಾಗೇವಾಡಿ: ಜ. 5, 6ರಂದು ಮಾಜಿ ಸಚಿವ ಬಾಬಾಗೌಡ ಪಾಟೀಲ ಕಂಚಿನ ಪುತ್ಥಳಿ ಅನಾವರಣ, ಕೃಷಿ ಸಂಪದ ಸಮಾರಂಭ
ಕಿತ್ತೂರು: ರೈತ ಹೋರಾಟಗಾರ, ಪ್ರಗತಿಪರ ವಿಚಾರವಾದಿ, ಕೇಂದ್ರ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ದಿವಂಗತ ಬಾಬಾಗೌಡ ರುದ್ರಗೌಡ ಪಾಟೀಲ ಅವರ ಕಂಚಿನ ಪುತ್ಥಳಿ ಅನಾವರಣ ಹಾಗೂ ಕೃಷಿ ಸಂಪದ ಸಮಾರಂಭ ಜ 5 ಹಾಗೂ 6ರಂದು ಅವರ ಹುಟ್ಟೂರಾದ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಜನವರಿ 5 ರಂದು ಸಂಜೆ 4ಕ್ಕೆ ನಡೆಯಲಿರುವ ಕೃಷಿ ಸಂಪದ ಸಮಾರಂಭದ ದಿವ್ಯ ಸಾನಿಧ್ಯವನ್ನು ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ವಹಿಸುವರು.
ಅಧ್ಯಕ್ಷತೆಯನ್ನು ಹಿರಿಯ ರೈತ ಹೋರಾಟಗಾರ ಸುರೇಶಬಾಬು ಪಾಟೀಲ, ಮುಖ್ಯ ಅತಿಥಿಗಳಾಗಿ ಅಖಂಡ ಕರ್ನಾಟಕ ರೈತ ಸಂಘದ
ಗೌರವಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ ಸಿದ್ಧನಗೌಡ ಪಾಟೀಲ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ವಾಲಿ ವಹಿಸಲಿದ್ದಾರೆ.
ಅತಿಥಿಗಳಾಗಿ ಜಿ ಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ನ ಮಹಿಳಾ ಪ್ರಧಾನ ಕಾರ್ಯದರ್ಶಿ ರೋಹಿಣಿ ಪಾಟೀಲ, ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ಮೋಹನ ಸಂಬರಗಿ, ರೈತ ಮುಖಮಂಡರಾದ ಶಂಕರಪ್ಪ ಯಡಳ್ಳಿ, ಫಕ್ಕೀರಗೌಡ ಪಾಟೀಲ, ಶಿವಾನಂದ ಹೊಳಹಡಗಲಿ, ಗ್ರಾಪಂ ಅಧ್ಯಕ್ಷ ಬಸವರಾಜ ಗಡೆನ್ನನಕ, ಪ್ರಗತಿ ಸೊಸೈಟಿ ಅಧ್ಯಕ್ಷ ಮಲ್ಲನಾಯ್ಕ ಭಾವಿ, ದೇಮನಗೌಡ ಪಾಟೀಲ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಜನವರಿ 6 ರಂದು ಕಂಚಿನ ಪುತ್ಥಳಿ ಅನಾವರಣ ಸಮಾರಂಭವು ಮುಂಜಾನೆ 10 ಗಂಟೆಗೆ ನೆಲವೇರಲಿದ್ದು ದಿವ್ಯ ಸಾನಿಧ್ಯವನ್ನು ಸುತ್ತೂರು ಸಂಸ್ಥಾನ ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಡಂಬಳ-ಗದಗ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ತೋಂಟದ ಡಾ.ಸಿದ್ದರಾಮ ಸ್ವಾಮೀಜಿ, ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ, ಕೂಡಲ ಸಂಗಮ ಜಗದ್ಗುರು ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಅಥಣಿ ವಿಮೋಚನಾ ಸಂಸ್ಥೆ ಅಧ್ಯಕ್ಷರಾದ ಬಿ ಎಲ್ ಪಾಟೀಲ, ಮುಖ್ಯ ಅತಿಥಿಗಳಾಗಿ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನಮನಗೌಡ್ರು ಬೆಳಕುರ್ಕಿ, ಅತಿಥಿಗಳಾಗಿ ರೈತ ಹೋರಾಟಗಾರರಾದ ಸುನಂದಾ ಜಯರಾಂ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ, ರೈತ ಹೋರಾಟಗಾರರಾದ ಕೆ.ಟಿ.ಗಂಗಾಧರ, ಚುಕ್ಕಿ ನಂಜುಂಡಸ್ವಾಮಿ, ಪಜ್ಜೆ ನಜುಂಡ ಸ್ವಾಮಿ, ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ, ಗೌರವಾಧ್ಯಕ್ಷ ಶಶಿಕಾಂತ ಜೆಡಗಿ ಮಾಜಿ ಶಾಸಕ ಶಿವಾನಂದ ಆಂಬಡಗಟ್ಟಿ,ಮಾಜಿ ಸಚಿವ ಶಶಿಕಾಂತ ನಾಯಕ, ನೀಲಕಂಠೇಶ್ವರ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ಸಾಧುನವರ, ಹೈಕೋರ್ಟ್ ವಕೀಲ ಹೋರಾಟಗಾರ ಪಿ. ಎಚ್. ನೀರಲಕೇರಿ, ರೈತ ಮುಖಂಡ ರಾಮಣ್ಣ ಹುಕ್ಕೇರಿ, ಕಾರ್ಮಿಕ ಮುಖಂಡ ವಿ. ಪಿ. ಕುಲಕರ್ಣಿ, ಮಾನಸಿಂಗ್, ರಜಪೂತ ಸೇರಿದಂತೆ ನಾಡಿನ ಎಲ್ಲ ರೈತ ಹೋರಾಟಗಾರರು, ಮುಖಂಡರುಗಳು, ಬಾಬಾಗೌಡ ಪಾಟೀಲ ಅವರ ಅಭಿಮಾನಿಗಳು ಹಾಗೂ ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಿಂದ ರೈತರು ಆಗಮಿಸಲಿದ್ದಾರೆ ಎಂದು ಬಾಬಾಗೌಡ ರುದ್ರಗೌಡ ಪಾಟೀಲ ಪುತ್ಥಳಿ ಅನಾವರಣ ಸಮಿತಿ ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ.
ಈ ವೇಳೆ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ವಾಲಿ, ಅಖಂಡ ಕರ್ನಾಟಕ ರೈತ ಸಂಘದ ಯುವ ಘಟಕದ ಅಧ್ಯಕ್ಷ ಈಶಪ್ರಭು ಪಾಟೀಲ, ಬಸವರಾಜ ಚಿನಗುಡಿ, ಬಸವಣ್ಣೆಪ್ಪ ಅಂಗಡಿ, ನಿಂಗಪ್ಪ ನಂದಿ, ಬಸವರಾಜ ಡೊಂಗರಗಾವಿ, ಆನಂದ ಹಂಪಣ್ಣವರ, ಸಂಗಮೇಶ ನೇಗಿನಹಾಳ, ರಾಚಯ್ಯ ಹಿರೇಮಠ, ಸೇರಿದಂತೆ ಇನ್ನೂ ಅನೇಕ ರೈತ ಮುಖಂಡರು ಇದ್ದರು.