'ನಾ ಖಾವೂಂಗಾ, ನಾ ಖಾನೆದೂಂಗಾ' ಎಂಬ ಡೈಲಾಗ್ ಭಾಷಣಕ್ಕೆ ಮಾತ್ರವೇ?: ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಗುತ್ತಿಗೆದಾರರ ಶೇ.40 ಕಮಿಷನ್ ಆರೋಪದ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ 'ನಾ ಖಾವೂಂಗಾ, ನಾ ಖಾನೆದೂಂಗಾ' (ನಾನೂ ತಿನ್ನುವುದಿಲ್ಲ, ತಿನ್ನಲು ಬಿಡುವುದೂ ಇಲ್ಲ) ಎಂಬ ಡೈಲಾಗ್ ಭಾಷಣಕ್ಕೆ ಮಾತ್ರವೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯ 40% ಕಮಿಷನ್ ಲೂಟಿಯ ಬಗ್ಗೆ ಗುತ್ತಿಗೆದಾರರು ಪತ್ರ ಬರೆದರೂ ಪ್ರಧಾನಿಯಿಂದ ಕ್ರಮವೂ ಇಲ್ಲ, ಪ್ರತಿಕ್ರಿಯೆಯೂ ಇಲ್ಲ, ಲೂಟಿಗೆ ಬೇಸತ್ತ ಗುತ್ತಿಗೆದಾರರು ಪ್ರಧಾನಿ ಭೇಟಿಗೆ ತೆರಳಲು ನಿರ್ಧರಿಸಿದ್ದಾರೆ ಎಂದರೆ ಬಿಜೆಪಿ ಸರ್ಕಾರದ ಕಮಿಷನ್ ಲೂಟಿ ನಿಂತಿಲ್ಲ ಎಂದರ್ಥವಲ್ಲವೇ? 'ನಾ ಖಾವುಂಗ, ನ ಖಾನೆದುಂಗ' ಎಂಬ ಡೈಲಾಗ್ ಭಾಷಣಕ್ಕೆ ಮಾತ್ರವೇ?'' ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಬಿಜೆಪಿಯ 40% ಕಮಿಷನ್ ಲೂಟಿಯ ಬಗ್ಗೆ ಗುತ್ತಿಗೆದಾರರು ಪತ್ರ ಬರೆದರೂ ಪ್ರಧಾನಿಯಿಂದ ಕ್ರಮವೂ ಇಲ್ಲ, ಪ್ರತಿಕ್ರಿಯೆಯೂ ಇಲ್ಲ,
— Karnataka Congress (@INCKarnataka) January 4, 2022
ಲೂಟಿಗೆ ಬೇಸತ್ತ ಗುತ್ತಿಗೆದಾರರು ಪ್ರಧಾನಿ ಭೇಟಿಗೆ ತೆರಳಲು ನಿರ್ಧರಿಸಿದ್ದಾರೆ ಎಂದರೆ ಬಿಜೆಪಿ ಸರ್ಕಾರದ ಕಮಿಷನ್ ಲೂಟಿ ನಿಂತಿಲ್ಲ ಎಂದರ್ಥವಲ್ಲವೇ?
'ನಾ ಖಾವುಂಗ, ನ ಖಾನೆದುಂಗ' ಎಂಬ ಡೈಲಾಗ್ ಭಾಷಣಕ್ಕೆ ಮಾತ್ರವೇ? pic.twitter.com/an2lVEY9yu