ರಾಜ್ಯದಲ್ಲಿಂದು 5,031 ಮಂದಿಗೆ ಕೊರೋನ ದೃಢ, ಓರ್ವ ಮೃತ್ಯು

Update: 2022-01-06 16:30 GMT

ಬೆಂಗಳೂರು, ಜ.6: ರಾಜ್ಯದಲ್ಲಿ ಗುರುವಾರ 5,031 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. ಒಬ್ಬರು ಸೋಂಕಿಗೆ ಬಲಿಯಾಗಿದ್ದು, 271 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 3,022,603ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 38,358ಕ್ಕೆ ತಲುಪಿದೆ.        
ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 22,173ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

ಒಂದು ಸಾವು: ಬೆಂಗಳೂರು ನಗರ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 5,031 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬೆಳಗಾವಿ 64, ಬೆಂಗಳೂರು ಗ್ರಾಮಾಂತರ 25, ಬೆಂಗಳೂರು ನಗರ 4,324, ಚಾಮರಾಜನಗರ 2, ಚಿಕ್ಕಬಳ್ಳಾಪುರ 20, ಚಿಕ್ಕಮಗಳೂರು 9, ಚಿತ್ರದುರ್ಗ 4, ದಕ್ಷಿಣ ಕನ್ನಡ 106, ದಾವಣಗೆರೆ 3, ಧಾರವಾಡ 48, ಗದಗ 11, ಹಾಸನ 47, ಕಲಬುರಗಿ 25, ಕೊಡಗು 19, ಕೋಲಾರ 14, ಮಂಡ್ಯ 66, ಮೈಸೂರು 65, ರಾಮನಗರ 3, ಶಿವಮೊಗ್ಗ 16, ತುಮಕೂರು 20, ಉಡುಪಿ 92, ಉತ್ತರ ಕನ್ನಡ 13, ವಿಜಯಪುರ ಜಿಲ್ಲೆಯಲ್ಲಿ 11  ಪ್ರಕರಣ ಪತ್ತೆಯಾಗಿವೆ.  

ರಾಜಧಾನಿಯಲ್ಲಿ 4,324 ಜನರಿಗೆ ಕೊರೋನ ದೃಢ

ರಾಜಧಾನಿಯಲ್ಲಿ ಗುರುವಾರದಂದು 4,324 ಜನರಿಗೆ ಕೊರೋನಸೋಂಕು ದೃಢಪಟ್ಟಿವೆ. ಒಬ್ಬರು ಸೋಂಕಿಗೆ ಬಲಿಯಾಗಿದ್ದು, ಒಟ್ಟು 12,41,046 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ನಗರದಲ್ಲಿ ಇಲ್ಲಿಯವರೆಗೆ ಒಟ್ಟು 12,76,374  ಕೊರೋನ ಸೋಂಕಿತರು ದೃಢಪಟ್ಟಿದ್ದು, ಒಟ್ಟು 16,414 ಜನರು ಸೋಂಕಿಗೆ ಬಲಿಯಾಗಿದ್ದಾರೆ.  

ಕೋವಿಡ್ ನಿಗದಿತ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News