ಬರಹಗಾರ ಯು.ಪಿ.ಪುರಾಣಿಕ್ ನಿಧನ

Update: 2022-01-06 16:46 GMT

ಬೆಂಗಳೂರು, ಜ.6: ಕನ್ನಡದ ಪ್ರಮುಖ ಆರ್ಥಿಕ ವಿಷಯಗಳ ಬರಹಗಾರ ಹಾಗೂ ಬ್ಯಾಂಕಿಂಗ್ ತಜ್ಞರಾಗಿರುವ ಯು.ಪಿ.ಪುರಾಣಿಕ್, ಆರೋಗ್ಯ ಸಂಬಂಧಿ ಸಮಸ್ಯೆಯಿಂದಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

ಕನ್ನಡದ ಪ್ರಮುಖ ಆರ್ಥಿಕ ವಿಷಯಗಳ ಬರಹಗಾರರಾಗಿರುವ ಯು.ಪಿ.ಪುರಾಣಿಕ ಅವರು ಮೂಲತಃ ಉಡುಪಿ ಜಿಲ್ಲೆಯ ಉಪ್ಪುಂದ ಗ್ರಾಮದವರಾದರೂ ಬೆಂಗಳೂರಿನಲ್ಲಿ ನೆಲೆಸಿದವರು.

ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ವಿಭಾಗೀಯ ಪ್ರಬಂಧಕರು ಹಾಗೂ ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್‍ನ ವೃತ್ತಿಪರ ನಿರ್ದೇಶಕರಾಗಿದ್ದು, ಬ್ಯಾಂಕಿಂಗ್ ಸಾಕ್ಷರತೆ ಹಾಗೂ ವಿತ್ತೀಯ ಸೇರ್ಪಡೆ ವಿಚಾರಗಳಲ್ಲಿ ಪ್ರಜಾವಾಣಿಯೂ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸುಮಾರು ಒಂದು ಸಾವಿರ ಅಂಕಣ ಲೇಖನಗಳನ್ನು ಬರೆದ ಕೀರ್ತಿ ಇವರಿಗೆ ಸಲ್ಲುತ್ತದೆ. ಹಣಕಾಸು ಹಿತೈಷಿ, ಮನಿ ಪವರ್, ಯಾರಿಗೆ ಬೇಡ ದುಡ್ಡು!?, ಉಳಿತಾಯದ ಉಪಾಯಗಳು ಇವರ ಕೃತಿಗಳು. 

ಧಾರವಾಡದಲ್ಲಿ ನಡೆದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇವರನ್ನು ಸನ್ಮಾನಿಸಿತ್ತು. ಬೆಂಗಳೂರಿನಲ್ಲಿ ನಡೆದ ಅಖಿಲ ಹವ್ಕಕ ವಿಶ್ವ ಸಮ್ಮೇಳನದಲ್ಲಿ ‘ಸಾಧಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News