ವೀಕೆಂಡ್ ಕರ್ಫ್ಯೂ: ಹೊಟೇಲ್, ರೆಸಾರ್ಟ್‍ಗಳಲ್ಲಿ ನಿರ್ಬಂಧ ಕುರಿತು ಸರಕಾರದ ಅಧಿಸೂಚನೆ

Update: 2022-01-07 16:59 GMT

ಬೆಂಗಳೂರು, ಜ.7: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಹೊಟೇಲ್/ರೆಸಾರ್ಟ್‍ಗಳಲ್ಲಿ ತಂಗುವುದಕ್ಕೆ ಪ್ರವಾಸಿಗರ ಚಲನವಲನ ಮತ್ತು ಅರಣ್ಯ ಪ್ರದೇಶಗಳಲ್ಲಿ ಸಫಾರಿಗೆ ವಿಧಿಸಿರುವ ನಿರ್ಬಂಧಗಳ ಕುರಿತಂತೆ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.

ವಾರಾಂತ್ಯಕ್ಕೆ ಬುಕ್ಕಿಂಗ್ ಮಾಡಿ, ಅಧಿಕೃತ ದಾಖಲೆಗಳನ್ನು ಹೊಂದಿರುವ ಪ್ರವಾಸಿಗರು ತಮ್ಮ ಕಾರುಗಳು/ಟ್ಯಾಕ್ಸಿ ಮತ್ತು ಇತರ ಸಾರಿಗೆ ವಿಧಾನಗಳ ಮೂಲಕ ಪ್ರಯಾಣಿಸಲು ಅನುಮತಿಸಿದೆ.

ಹೊಟೇಲ್/ರೆಸಾರ್ಟ್‍ಗಳಲ್ಲಿ ತಂಗಿರುವಂತಹ ಅತಿಥಿಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ಎಲ್ಲ ಸೌಲಭ್ಯಗಳನ್ನು ಹೊಟೇಲ್/ರೆಸಾರ್ಟ್‍ಗಳಲ್ಲಿ ತಂಗಿರುವಂತಹ ಅತಿಥಿಗಳಿಗಾಗಿ ಮಾತ್ರ ಒದಗಿಸಲು ಅನುಮತಿಸಿದೆ. ಅಲ್ಲದೆ, ಬುಕಿಂಗ್ ಮಾಡಿರುವ ದಾಖಲೆಯೊಂದಿಗೆ ಅತಿಥಿಗಳು ಹೊಟೇಲ್‍ಗಳಲ್ಲಿ ಚೆಕ್-ಇನ್ ಹಾಗೂ ಚೆಕ್-ಔಟ್ ಮಾಡಬಹುದು. 

ಕೋವಿಡ್‍ನ ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸಿ, ಅರಣ್ಯ ಪ್ರದೇಶಗಳು ಮತ್ತು ಅಭಯಾರಣ್ಯಗಳಲ್ಲಿ ಸಫಾರಿಗೆ ಅನುಮತಿಯನ್ನು ನೀಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸರಕಾರದ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News