×
Ad

ಗುಂಡ್ಲುಪೇಟೆ : ಟಿಪ್ಪರ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Update: 2022-01-08 16:51 IST

ಗುಂಡ್ಲುಪೇಟೆ: ಕಲ್ಲು ಸಾಗಿಸುವ ಟಿಪ್ಪರ್ ಲಾರಿಯೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. 

ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿ ಹಳ್ಳದಮಾದಳ್ಳಿ ಗೇಟ್ ಬಳಿ ಗಣಿಗಾರಿಕೆಯ ಕಲ್ಲು ಸಾಗಿಸುವ ಲಾರಿ  ಬೈಕ್ ಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. 

ಮೃತ ವ್ಯಕ್ತಿಯನ್ನು ನಂಜನಗೂಡು ತಾಲೂಕಿನ ಮಲ್ಲಹಳ್ಲಿ ಗ್ರಾಮದ ಮುದ್ದರಾಜಪ್ಪ ಎಂದು ಗುರುತಿಸಲಾಗಿದೆ. 

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News