ವಾರಾಂತ್ಯ ಕರ್ಪ್ಯೂ: ಶಿವಮೊಗ್ಗದಲ್ಲಿ ಜನ ಸಂಚಾರ ವಿರಳ

Update: 2022-01-08 16:55 GMT

ಶಿವಮೊಗ್ಗ, ಜ.08 : ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದಲೇ ಆರಂಭವಾದ ವಿಕೇಂಡ್ ಕರ್ಪ್ಯೂ ಬಿಸಿ ನಿರೀಕ್ಷೆ ಯಂತೆ ಜನತೆಗೆ ಗಾಢವಾಗಿಯೇ ತಟ್ಟಿದೆ. ಜಿಲ್ಲಾಡಳಿತ ಹಾಗೂ ಜಿಲ್ಲಾಪೊಲೀಸ್ ಇಲಾಖೆಯು ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿರುವು ದರಿಂದ ಅಗತ್ಯ ಸೇವೆ ಹೊರತು ಪಡಿಸಿ, ಸಾರಿಗೆ ಹಾಗೂ ಎಲ್ಲಾ ಬಗೆಯ ವ್ಯಾಪಾರ ವಹಿವಾಟುಗಳು ಬಹುತೇಕ ಬಂದ್ ಆಗಿದ್ದವು. ಇನ್ನು ಕೆಲವೆಡೆ ಯಥಾಸ್ಥಿತಿ ಪರಿಸ್ಥಿತಿಯೂ ಕಂಡು ಬಂತು.

ಶಿವಮೊಗ್ಗ ನಗರದಲ್ಲಿ ಬೆಳಗ್ಗೆ ಯಿಂದ ಜನ ಸಂಚಾರ ಹಾಗೂ ವಾಹನ ಓಡಾಟದಲ್ಲಿ ಕೊಂಚ ರಿಲೀಪ್ ಇತ್ತಾದರೂ, ಆನಂತರ ಪೊಲೀಸರು ರಸ್ತೆಗಳಿದು ಜನರ ಓಡಾಟ ಹಾಗೂ ವಾಹನ ಸಂಚಾರಕ್ಕೆ ತಡೆ ಹಾಕಿದ ನಂತರ ನಗರದ ಬಹುತೇಕ ಸೇಮಿ ಲಾಕ್‌ಡೌನ್ ಪರಿಸ್ಥಿತಿಗೆ ಸಿಲುಕಿತು.
 ಬಿ ಎಚ್‌ರೋಡ್, ನೆಹರು ರಸ್ತೆ, ಸವಳಂಗ ರಸ್ತೆ, ಸಾಗರ ರಸ್ತೆ ಹಾಗೂ ವಿನೋಬ ನಗರ ಪೊಲೀಸ್ ಚೌಕಿ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕುವ ಮೂಲಕ ವಾಹನ ಸಂಚಾರಕ್ಕೆ ತಡೆಹಾಕಿದ್ದು ಕಂಡು ಬಂತು.

ಆಸ್ಪತ್ರೆ, ಮೆಡಿಕಲ್, ತರಕಾರಿ ಮಾರಾಟ, ಹಣ್ಣು- ಹಾಲು ಸೇರಿದಂತೆ ಕೈಗಾರಿಕೆಗಳ ಕೆಲಸಕ್ಕೆ ಹೋಗುವವರನ್ನು ಹೊರತು ಪಡಿಸಿ, ರಸ್ತೆಗಳಲ್ಲಿ ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಪೊಲೀಸರು ಸರಿಯಾಗಿಯೇ ಬಿಸಿ ಮುಟ್ಟಿಸಿದರು.

ಜಿಲ್ಲಾ ರಕ್ಷಣಾಧಿಕಾರಿಗಳು ನಗರ ಪ್ರದಕ್ಷಣೆ ಮಾಡುವ ಮೂಲಕ ಕರ್ಪ್ಯೂ ಪರಿಸ್ಥಿತಿ ನಿರ್ವಹಣೆ ಮಾಡಿದರು. ತಾವೇ ಖುದ್ದಾಗಿ ವಾಹನಗಳ ತಪಾಸಣೆ ನಡೆಸಿ ದರಲ್ಲದೆ, ವಿನಾಕಾರಣ ಹೊರ ಬಂದ ತಪ್ಪಿಗೆ ಕೆಲವರಿಗೆ ಬಿಸಿ ಮುಟ್ಟಿಸಿದರು. ಹಾಗೆಯೇ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದರು.

ಎಪಿಎಂಸಿ ರಸ್ತೆಯಲ್ಲಿ ಮಾಸ್ಕ್ ಹಾಕದೆ ತಿರುಗಾಡು ತ್ತಿದ್ದವರಿಗೆ ಪೊಲೀಸರು ದಂಡ ಹಾಕಿದರು. ನಗರದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಎಂದಿ ನಂತೆ ಬಸ್ ಸಂಚಾರ ಇರಲಿಲ್ಲ. ಕೆಲವು ಹೊರ ಊರುಗಳಿಗೆ ಹೋಗುವುದಕ್ಕಾಗಿ ಬಸ್ ನಿಲ್ದಾಣಕ್ಕೆ ಬಂದು ಬಹು ಹೊತ್ತಿನ ತನಕ ಬಸ್ಸುಗಳಿಗಾಗಿ ಕಾದರು. ಇನ್ನುಕೆಲವೆಡೆ ತುರ್ತು ಕೆಲಸಗಳಗೆ ಹೊರಟ್ಟಿದ್ದ ಜನರು, ಪೊಲೀಸರ ಮುಂದೆ ಸೂಕ್ತ ಮಾಹಿತಿ ನೀಡದೆ ತಡ ಬಡಿಸಿದ ಘಟನೆಗಳು ನಡೆದವು. ವಿಕೇಂಡ್ ಕರ್ಪ್ಯೂ ಇಂದಿನಿಂದ ಸೋಮವಾರದ ಮುಂಜಾನೆಯ ವರೆಗೆ ಮುಂದು ವರೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಕಡೆಗಳಲ್ಲೂ ಕೋವಿಡ್ ಮಾರ್ಗ ಸೂಚಿ ಕಟ್ಟು ನಿಟ್ಟಾಗಿ ಪಾಲಿಸುವಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದೆ, ಹಾಗಾಗಿ ಇದರ ಬಿಸಿ ಭಾನುವಾರದವರೆಗೆ ತಟ್ಟಲಿದೆ.

ಭದ್ರಾವತಿ:  ಕೊರೋನದ ಕಾರಣ ಸರ್ಕಾರದ ಕಾನೂನಿನ್ವಯ ವಿಕೆಂಡ್ ಕರ್ಫ್ಯೂಗೆ ಭದ್ರಾವತಿ ಸಂಪೂರ್ಣ ಸ್ಥಬ್ದವಾಗಿತ್ತು. ಎರಡನೆ ಶನಿವಾರ ವಿಕೆಂಡ್ ಕರ್ಫ್ಯೂ ಆಧಾರದಲ್ಲಿ ಸರ್ಕಾರದ ಕಚೇರಿಗಳು, ಬ್ಯಾಂಕ್ ಮುಂಗಟ್ಟುಗಳು  ಮುಚ್ಚಿದ್ದವು. ಆಟೋಗಳು ವಿರಳ ಸಂಚಲನೆ ಇದ್ದರೆ,  ಸರ್ಕಾರಿ ಹಾಗು ಖಾಸಗಿ ಬಸ್‌ಗಳು ಸಂಚರಿಸಲಿಲ್ಲ. ಜನರ ಓಡಾಟ ಅತಿವಿರಳವಾಗಿತ್ತು. ಕೆಲ ಅಂಗಡಿಗಳನ್ನು ಹೊರತು ಪಡಿಸಿ ಇತರೆ ಎಲ್ಲಾ  ಅಂಗಡಿಗಳು ಮುಚ್ಚಿದ್ದವು.ಸದಾ ಗಿಜಿಗುಡುತ್ತಿದ್ದ ನಗರದ ಪ್ರಮುಖ ರಸ್ತೆಗಳು ಬಂದ್‌ನಿಂದಾಗಿ ಬಿಕೋ ಎನ್ನುತ್ತಿದ್ದವು. ವಾಹನಗಳ ಸಂಚಾರ ಅತಿ ವಿರಳವಾಗಿತ್ತು.

ಕಾರ್ಗಲ್ ಪಟ್ಟಣ ಸಂಪೂರ್ಣ ಸ್ದಬ್ದ:

ವೀಕೆಂಡ್ ಕರ್ಫ್ಯೂ ಹಿನ್ನಲೆಯಲ್ಲಿ ಕಾರ್ಗಲ್ ಪಟ್ಟಣ ಸಂಪೂರ್ಣ ಸ್ದಬ್ದವಾಗಿದೆ.ಅಂಗಡಿಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿದೆ.ಪಟ್ಟಣದ ವ್ಯಾಪ್ತಿಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.
ಪಿಎಸ್‌ಐ ತಿರುಮಲೇಶ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಗಲ್  ಪಟ್ಟಣದಲ್ಲಿ  ಗಸ್ತು ಮತ್ತು ವಾಹನ ತಪಾಸಣೆ ನಡೆಸಿದರು.ಅನಗತ್ಯವಾಗಿ ರಸ್ತೆಗಿಳಿದವರ ವಾಹನಗಳನ್ನು ತಪಾಸಣೆ ನಡೆಸಿ,ವಶಕ್ಕೆ ಪಡೆದುಕೊಂಡಿದ್ದಾರೆ.ಅಗತ್ಯವಸ್ತುಗಳ,ಔಷಧಿ ಅಂಗಡಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News