ಕರ್ನಾಟಕ ಕೋವಿಡ್-19 ವಾರ್ ರೂಮ್ ಗೆ ಇ-ಆಡಳಿತ ರಾಷ್ಟ್ರೀಯ ಪ್ರಶಸ್ತಿ
Update: 2022-01-08 22:26 IST
ಬೆಂಗಳೂರು,ಜ.8: ಕೋವಿಡ್-19 ಸಾಂಕ್ರಾಮಿಕದ ನಿರ್ವಹಣೆಯಲ್ಲಿ ಮಾಹಿತಿ,ಸಂವಹನ ಮತ್ತು ತಂತ್ರಜ್ಞಾನ (ಐಸಿಟಿ)ದ ಬಳಕೆಗಾಗಿ ಮನೀಶ್ ಮೌದ್ಗೀಲ್ ನೇತೃತ್ವದ ಕರ್ನಾಟಕ ರಾಜ್ಯ ಕೋವಿಡ್-19 ವಾರ್ ರೂಮ್ ಗೆ 2020-21ನೇ ಸಾಲಿನ ಇ-ಆಡಳಿತಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಕೇಂದ್ರ ಸರಕಾರದ ಸಿಬ್ಬಂದಿ,ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ಇ-ಆಡಳಿತ ವಿಭಾಗವು ಕರ್ನಾಟಕವನ್ನು ಆಯ್ಕೆ ಮಾಡಿದ್ದು,ತೆಲಂಗಾಣದ ಹೈದರಾಬಾದ್ ನಲ್ಲಿ ಜ.7 ಮತ್ತು 8ರಂದು ನಡೆದ ಎರಡು ದಿನಗಳ ಇ-ಆಡಳಿತ ಕುರಿತು 24ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.