ಶಿವಮೊಗ್ಗ: ದಂಡ ವಿಧಿಸಲು ಬಂದ ಅಧಿಕಾರಿಗಳಿಗೆ ಜನರಿಂದ ತರಾಟೆ

Update: 2022-01-09 17:06 GMT

ಶಿವಮೊಗ್ಗ, ಜ.09: ಮಾಸ್ಕ್ ಧಾರಣೆ ಮಾಡದೇ ಇದ್ದವರಿಗೆ ದಂಡ ವಿಧಿಸಲು ಬಂದ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಜನರು ತರಾಟೆ ತೆಗೆದುಕೊಂಡ ಘಟನೆ ಗಾಂಧಿ ಬಜಾರ್ ನಲ್ಲಿ ರವಿವಾರ ನಡೆದಿದೆ.

ಮೂರನೇ ಅಲೆ, ವೀಕೆಂಡ್ ಕರ್ಫ್ಯೂ ಹಿನ್ನೆಲೆ ಪಾಲಿಕೆ ಅಧಿಕಾರಿಗಳ ನಾಲ್ಕು ತಂಡಗಳು ಗಾಂಧಿ ಬಜಾರ್‍ನಲ್ಲಿ ಏಕಾಏಕಿ ಕಾರ್ಯಾಚರಣೆ ನಡೆಸಿದೆ. ಮಾಸ್ಕ್ ಹಾಕದೇ ಓಡಾಡುತ್ತಿದ್ದವರನ್ನು ತಡೆದು ದಂಡ ವಿಧಿಸಲು ಮುಂದಾಗಿದೆ. ಆಗ ಪರಸ್ಪರ ವಾಗ್ವಾದ ಏರ್ಪಟ್ಟಿದೆ.

ತರಕಾರಿ ಮಾರುಕಟ್ಟೆ ಬಳಿ ವ್ಯಕ್ತಿಯೊಬ್ಬರು ಮಾಸ್ಕ್ ಧಾರಣೆ ಮಾಡದ ಕಾರಣಕ್ಕೆ ದಂಡ ವಸೂಲಿಗೆ ಮುಂದಾದಾಗ ಆತ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಅಕ್ಕಪಕ್ಕ ಇದ್ದ ಸಾರ್ವಜನಿಕರು ಅಲ್ಲಿಯೇ ನೆರೆದು ಅಧಿಕಾರಿಗಳೇ ಪೇಚಿಗೆ ಸಿಲುಕಿದ್ದರು.

`ತರಕಾರಿ ತರಲು 100-200 ರು. ತಂದಿರುತ್ತೇವೆ. ಅದನ್ನು ಕಿತ್ತುಕೊಂಡು ಹೋದರೆ ಏನು ಮಾಡಬೇಕು. ರಾಜಕಾರಣಿಗಳು ಯಾವ ಮಾರ್ಗಸೂಚಿಯನ್ನು ಪಾಲಿಸದೇ, ಮಾಸ್ಕ್ ಧರಿಸಿದೇ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೆ ದಂಡ ಹಾಕಿ. ಅವರಿಗೊಂದು ಕಾನೂನು ನಮಗೊಂದು ಕಾನೂನು ಏಕೆ' ಎಂದು ಜನರು ತರಾಟೆ ತೆಗೆದುಕೊಂಡರು. ಜನರು ಒಗ್ಗೂಡಿ ದನಿ ಎತ್ತಿದ್ದೇ ಅಧಿಕಾರಿಗಳು ಅಲ್ಲಿಂದ ಕಾಲು ಕಿತ್ತರು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News