×
Ad

ಮುದ್ದೇಬಿಹಾಳ: ಖಬರಸ್ತಾನ್‍ದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಭಾವೈಕ್ಯತೆ ಮೆರೆದ ಚನ್ನವೀರ ಸ್ವಾಮೀಜಿ

Update: 2022-01-10 18:09 IST

ವಿಜಯಪುರ, ಜ.10: ಮುದ್ದೇಬಿಹಾಳ ಪಟ್ಟಣದ ತಾಳಿಕೋಟೆ ರಸ್ತೆಯಲ್ಲಿರುವ ಮುಸ್ಲಿಂ ಸಮಾಜದ  ಖಬರಸ್ತಾನ(ಸ್ಮಶಾನ)ಕ್ಕೆ ಸ್ವಾಮೀಜಿಯೊಬ್ಬರು ಭೇಟಿ ನೀಡಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.

ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಹಿರೇಮಠದ ಚನ್ನವೀರ ದೇವರು ತಾಳಿಕೋಟೆ ರಸ್ತೆಯಲ್ಲಿರುವ ಮುಸ್ಲಿಂ ಸಮಾಜದ ಖಬರಸ್ತಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಮುಸ್ಲಿಂ ಸಮಾಜದ ಗೋರಿಯೊಂದನ್ನು ಸ್ವಚ್ಛಗೊಳಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮಾಜದ ಯುವಕರು ಕೈಗೊಂಡಿರುವ ಈ ಸ್ವಚ್ಛತಾ ಕಾರ್ಯ ಇತರರಿಗೂ ಮಾದರಿ. ವೀರಶೈವ ಲಿಂಗಾಯತ ಮಠಾಧಿಪತಿಗಳು ಕೇವಲ ಒಂದೇ ಧರ್ಮಕ್ಕೆ ಸೀಮಿತವಾಗಬಾರದು. ಎಲ್ಲ ಧರ್ಮವನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲೆ ಇರುವುದರಿಂದ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News