ತಂಬಾಕು ಮೇಲೆ ಮೂರು ರೀತಿಯ ತೆರಿಗೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ ನಿಂದ ವಜಾ

Update: 2022-01-10 15:26 GMT
file photo- High Court of Karnataka
 

ಬೆಂಗಳೂರು, ಜ.10: ತಂಬಾಕು ಉತ್ಪನ್ನಗಳ ಮೇಲೆ ಮೂರು ರೀತಿಯ ತೆರಿಗೆ ವಿಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.   

ತಂಬಾಕು ಉತ್ಪನ್ನಗಳ ಮೇಲೆ ಏಕಕಾಲದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ), ಅಬಕಾರಿ ಸುಂಕ ಮತ್ತು ರಾಷ್ಟ್ರೀಯ ವಿಪತ್ತು ಸಂಕಷ್ಟ ಸುಂಕವನ್ನು ವಿಧಿಸುವ ಕೇಂದ್ರ ಸರಕಾರದ ಕಾನೂನನ್ನು ಪ್ರಶ್ನಿಸಿ ವಿ.ಎಸ್.ಪ್ರಾಡಕ್ಟ್ಸ್ ಸೇರಿ ಹಲವು ತಂಬಾಕು ಉತ್ಪಾದಕರು ಮತ್ತು ತಂಬಾಕು ಉತ್ಪನ್ನಗಳ ಉತ್ಪಾದಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು.

ವಕೀಲರ ವಾದ ಆಲಿಸಿದ ನ್ಯಾಯಪೀಠ, ಕಲಂ 254ಎಗೆ ತಿದ್ದುಪಡಿ ಮಾಡಿ ಸರಕು ಮತ್ತು ಸೇವಾ ತೆರಿಗೆ ಆಡಳಿತ ಕಾನೂನುಗಳನ್ನು ಮಾಡುವ ಅಧಿಕಾರ ಹೊಂದಿದ್ದರೂ ಸಹ, 246 ಮತ್ತು 246 ಎ ವಿಧಿಯಡಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳು ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಅಬಕಾರಿ ಸುಂಕಗಳನ್ನು ವಿಧಿಸುವ ಅಧಿಕಾರ ಹೊಂದಿದೆ. 

ಹೀಗಾಗಿ, ಕಾನೂನುಗಳು ಸಿಂಧುವಾಗುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಏಕಕಾಲದಲ್ಲಿ ಜಿಎಸ್‍ಟಿ, ಅಬಕಾರಿ, ರಾಷ್ಟ್ರೀಯ ವಿಪತ್ತು ಸಂಕಷ್ಟ ಸುಂಕ ಸಂಗ್ರಹಿಸುವ ಕೇಂದ್ರ ಸರಕಾರದ ಕಾನೂನನ್ನು ಎತ್ತಿ ಹಿಡಿದು ತಂಬಾಕು ಉತ್ಪನ್ನಗಳ ತಯಾರಕರ ಅರ್ಜಿ ವಜಾಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News