ಮೈಸೂರು: ಹತ್ತನೇ ತರಗತಿ ಮಕ್ಕಳಿಗೆ ಭೌತಿಕವಾಗಿಯೇ ಪಾಠ; ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ
Update: 2022-01-12 23:54 IST
ಮೈಸೂರು,ಜ.12: ಮೈಸೂರು ತಾಲೂಕಿನಲ್ಲಿ (ಮೈಸೂರು ನಗರ ಒಳಗೊಂಡಂತೆ) 10ನೇ ತರಗತಿಯ ಭೌತಿಕ ತರಗತಿಗಳನ್ನು ನಡೆಸಲು ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಬುಧವಾರ ಆದೇಶ ಹೊರಡಿಸಿದ್ದಾರೆ.
ಕೊರೊನಾ ಹೆಚ್ಚಾದ ಹಿನ್ನಲೆಯಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳು 1ರಿಂದ 10ನೇ ತರಗತಿಯವರೆಗೆ ಶಾಲೆ ಬಂದ್ ಮಾಡಿ ಆದೇಶ ಹೊರಡಿಸಿದ್ದರು. ಆದರೆ 10ನೇ ತರಗತಿಯ ಮಕ್ಕಳ ಭವಿಷ್ಯದ ದ್ರಷ್ಟಿಯಿಂದ ಭೌತಿಕ ತರಗತಿ ನಡೆಸಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದಾರೆ.