ಕುವೈಟ್: ತೈಲ ಸಂಸ್ಕರಣಾಗಾರದಲ್ಲಿ ಬೆಂಕಿ ದುರಂತ; ಕನಿಷ್ಟ ಇಬ್ಬರು ಮೃತ್ಯು, ಹಲವರಿಗೆ ಗಾಯ

Update: 2022-01-14 16:27 GMT
ಸಾಂದರ್ಭಿಕ ಚಿತ್ರ

ದುಬೈ, ಜ.14: ಕುವೈಟ್ ನ ಮಿನಾ ಅಲ್ಅಹ್ಮದಿ ತೈಲ ಸಂಸ್ಕರಣಾಗಾರದ ಅನಿಲ ದ್ರವೀಕರಣ ಘಟಕದಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ದುರಂತದಲ್ಲಿ ಏಶ್ಯಾದ ಇಬ್ಬರು ಗುತ್ತಿಗೆದಾರರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ ಎಂದು ಕುವೈಟ್ ನ್ಯಾಷನಲ್ ಪೆಟ್ರೋಲಿಯಂ ಕಂಪೆನಿ ವರದಿ ಮಾಡಿದೆ.

ಬೆಂಕಿ ದುರಂತ ಸಂಭವಿಸಿದ ಸ್ಥಳದಲ್ಲಿದ್ದ ಏಶ್ಯಾದ ಇಬ್ಬರು ಗುತ್ತಿಗೆದಾರರು ಮೃತಪಟ್ಟಿರುವುದಾಗಿ ಘೋಷಿಸಲು ದುಃಖವಾಗುತ್ತದೆ. 10 ಮಂದಿ ಗಾಯಗೊಂಡಿದ್ದು ಇದರಲ್ಲಿ ತೀವ್ರ ಸುಟ್ಟಗಾಯಗಳಾದ 5 ಮಂದಿಯನ್ನು ಅಲ್ಅದನ್ ಆಸ್ಪತ್ರೆಯಿಂದ ಅಲ್ಬಬ್ಟೈನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 

3 ಮಂದಿಗೆ ಅಲ್ಪಸ್ವಲ್ಪ ಗಾಯವಾಗಿದ್ದು ಸಂಸ್ಕರಣಾಗಾರದಲ್ಲೇ ಪ್ರಥಮ ಚಿಕಿತ್ಸೆ ಒದಗಿಸಲಾಗಿದೆ ಎಂದು ಕಂಪೆನಿ ಟ್ವೀಟ್ ಮಾಡಿದೆ.

ಸಂಸ್ಕರಣಾಗಾರದಲ್ಲಿ ನಿರ್ವಹಣಾ ಕಾಮಗಾರಿ ಸಂದರ್ಭ ಬೆಂಕಿ ಕಾಣಿಸಿಕೊಂಡಿದ್ದು ತಕ್ಷಣ ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ರವಾನಿಸಲಾಗಿದೆ. ಕೆಟ್ಟುಹೋಗಿದ್ದ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸಂಸ್ಕರಣಾಗಾರದ ಕಾರ್ಯನಿರ್ವಹಣೆಗೆ , ಸ್ಥಳೀಯ ಮಾರುಕಟ್ಟೆ ಮತ್ತು ಪೂರೈಕೆ ಕಾರ್ಯಕ್ಕೆ ತೊಂದರೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News