ಸಕಲೇಶಪುರ: ಹೋಟೆಲ್ ನಲ್ಲಿ 'ಗೋಮಾಂಸ ಖಾದ್ಯ' ಆರೋಪಿಸಿ ಹಲ್ಲೆ; 6 ಮಂದಿ ಬಜರಂಗದಳ ಕಾರ್ಯಕರ್ತರ ವಿರುದ್ಧ ಪ್ರಕರಣ
Update: 2022-01-16 21:04 IST
ಸಕಲೇಶಪುರ: ಹೋಟೆಲೊಂದರಲ್ಲಿ ದನದ ಮಾಂಸ ಖಾದ್ಯ ಮಾರಾಟ ಮಾಡುತ್ತಿದ್ದಾರೆಂದು ಆರೋಪಿಸಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಬಜರಂಗದಳದ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ.
ಬಜರಂಗದಳ ಕಾರ್ಯಕರ್ತರಾದ ಶಿವು, ತೀರ್ಥ, ದಯಾನಂದ್, ಪ್ರಸಾದ್, ನವೀನ್, ಮತ್ತು ದೀಪು ಇವರ ಮೇಲೆ ಮೊಕದ್ದಮೆ ದಾಖಲಾಗಿದೆ.
ತಾಲೂಕಿನ ಮಾರನಹಳ್ಳಿ ಸಮೀಪದ ಹಿಲ್ ಟಾಪ್ ಹೋಟೆಲೊಂದರಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂದಿಸಿದಂತೆ ಬಜರಂಗದಳದ ಕಾರ್ಯಕರ್ತ ಶಿವು ದೂರಿನ ಮೇರೆಗೆ ಪಾಣೆ ಮಂಗಳೂರಿನ ಸಫ್ವಾನ್ ಸಲೀಂ, ಅಬ್ದುಲ್ ಜಬ್ಬಾರ್ ಸೇರಿದಂತೆ ಏಳು ಜನರ ಮೇಲೆ ಪ್ರಕರಣ ದಾಖಲಾಗಿತ್ತು.
ಇದೀಗ ಸಫ್ವಾನ್, ಸಲೀಂ, ಅಬ್ದುಲ್ ಜಬ್ಬಾರ್ ಇವರು ನೀಡಿದ ದೂರಿನ ಅನ್ವಯ 6 ಜನರ ಮೇಲೆ ಮೊಕದ್ದಮೆ ದಾಖಲಾಗಿದೆ.