×
Ad

ಜಯತೀರ್ಥ ರಾಜಪುರೋಹಿತ ದತ್ತಿ ಪ್ರಶಸ್ತಿ ಪ್ರಕಟ

Update: 2022-01-16 21:06 IST

ಬೆಂಗಳೂರು, ಜ.16: ಗುಲಬರ್ಗಾ ವಿಶ್ವ ವಿದ್ಯಾಲಯವು ನೀಡುವ 2022ನೆ ಸಾಲಿನ ದಿ.ಜಯತೀರ್ಥ ರಾಜಪುರೋಹಿತ ದತ್ತಿ ಪ್ರಶಸ್ತಿ ಪ್ರಕಟವಾಗಿದ್ದು, ಪ್ರಶಸ್ತಿಯು ನಗದು, ಪದಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.

ಕತೆ ವಿಭಾಗದಲ್ಲಿ ಡಾ.ಮುದೇನೂರು ನಿಂಗಪ್ಪರ `ಸ್ಮಾರ್ಟ್‍ಸಿಟಿ ಮಾರೆಮ್ಮ' ಮತ್ತು ಶಿವರಾಜ ಬಿ.ಇ. ಬರೆದಿರುವ `ಕಲ್ಮಣ್ ರಾಗಿ' ಕತೆಗಳಿಗೆ ಚಿನ್ನದ ಪದಕವನ್ನು, ಗವಿಸಿದ್ಧಪ್ಪ ಪಾಟೀಲ್‍ರ `ಬೀದರ್‍ನ ಹೂ ಚಿವುಟದಿರಿ' ಕತೆಗೆ ಬೆಳ್ಳಿ ಪದಕ, ಶಿವಶರಣಪ್ಪ ಕೋಡ್ಲಿ ಬರೆದಿರುವ `ಕಥೆಯಾಗಿ ಉಳಿದ ಅಪ್ಪ' ಕತೆಗೆ ಕಂಚಿನ ಪದಕ ಲಭಿಸಿದೆ. 

ಇನ್ನು ಕೃತಿ ವಿಭಾಗದಲ್ಲಿ ಎಸ್.ಎನ್.ಮುಲಗಿಯ `ಸಮಾಜದ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸೋಮಲಿಂಗ ಗೆಣ್ಣೂರರ ಅಂಬೇಡ್ಕರ್ ಮಾರ್ಗ' ಕೃತಿಯನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News